ಯಮನ್: 80 ಶೇ. ಮಕ್ಕಳಿಗೆ ತುರ್ತು ನೆರವಿನ ಅಗತ್ಯ
Update: 2017-07-26 20:59 IST
ಸನಾ (ಯಮನ್), ಜು. 26: ಯುದ್ಧ ಮತ್ತು ಕಾಲರದಿಂದಾಗಿ ಯಮನ್‌ನ 80 ಶೇಕಡಕ್ಕೂ ಅಧಿಕ ಮಕ್ಕಳು ಹಸಿವೆಯಿಂದ ಬಳಲುತ್ತಿದ್ದಾರೆ ಹಾಗೂ ಅವರಿಗೆ ತುರ್ತು ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಬುಧವಾರ ಹೇಳಿದೆ.
‘‘ಯಮನ್‌ನ ಸುಮಾರು 20 ಲಕ್ಷ ಮಕ್ಕಳು ತೀರಾ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಪೌಷ್ಟಿಕತೆಯಿಂದಾಗಿ ಅವರು ಹೆಚ್ಚೆಚ್ಚು ಕಾಲರಾಕ್ಕೆ ಬಲಿಯಾಗುತ್ತಿದ್ದಾರೆ. ಕಾಲರಾವು ಮತ್ತಷ್ಟು ಅಪೌಷ್ಟಿಕತೆಯನ್ನು ಸೃಷ್ಟಿಸುತ್ತಿದೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆ, ವಿಶ್ವಸಂಸ್ಥೆಯ ಮಕ್ಕಳ ನಿಧಿ ಮತ್ತು ವಿಶ್ವ ಆಹಾರ ಕಾರ್ಯಕ್ರಮ- ವಿಶ್ವಸಂಸ್ಥೆಯ ಈ ಮೂರು ಘಟಕ ಸಂಸ್ಥೆಗಳ ಕಾರ್ಯಕಾರಿ ನಿರ್ದೇಶಕರು ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.