ವೇಲ್ಸ್ ರಾಜಕುಮಾರನ ಭೇಟಿಗೆ ಕಾಂಗ್ರೆಸ್ ಬಹಿಷ್ಕಾರ

Update: 2017-07-27 18:12 GMT

1921, ಜು.28ರ ಈ ದಿನ ಇಂಗ್ಲೆಂಡ್‌ನ ವೇಲ್ಸ್ ಪ್ರಾಂತದ ರಾಜಕುಮಾರ ಭಾರತಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ದೇಶದಲ್ಲಿ ಬ್ರಿಟಿಷರ ವಿರುದ್ಧ ಜಾರಿಯಲ್ಲಿದ್ದ ಅಸಹಕಾರ ಚಳವಳಿಯ ಭಾಗವಾಗಿ ಕಾಂಗ್ರೆಸ್ ಈ ಭೇಟಿಯನ್ನು ಬಹಿಷ್ಕರಿಸಿತು. ಜಲಿಯನ್ ವಾಲಾಬಾಗ್ ದುರಂತದಲ್ಲಾದ ಹಿಂಸೆಯಿಂದ ಕೋಪೋದ್ರಿಕ್ತರಾಗಿದ್ದ ಭಾರತೀಯರು ಇಂಗ್ಲೆಂಡ್‌ನಿಂದ ತಯಾರಾಗಿ ಬರುವ ಎಲ್ಲ ವಸ್ತುಗಳನ್ನು ಬಹಿಷ್ಕರಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದರು. ಈ ಹೋರಾಟದ ಭಾಗವಾಗಿ ಗಾಂಧೀಜಿ ನೇತೃತ್ವದಲ್ಲಿ ಬ್ರಿಟಿಷ್ ರಾಜಕುಮಾರನ ಭೇಟಿಯನ್ನು ವಿರೋಧಿಸಲಾಯಿತು. ಕೊನೆಗೂ ಅದೇ ವರ್ಷದ ನವೆಂಬರ್ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದ ವೇಲ್ಸ್ ರಾಜಕುಮಾರ ಭಾರತೀಯರಿಂದ ಭಾರೀ ಹರತಾಳವನ್ನು ಎದುರಿಸಬೇಕಾಯಿತು.

* 1972ರ ಈ ದಿನ ಬಾಂಗ್ಲಾ ಯುದ್ಧ ಸಂಬಂಧವಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಶಿಮ್ಲಾ ಒಪ್ಪಂದಕ್ಕೆ ಅನುಮೋದಿಸಲಾಯಿತು.

* 1979ರ ಈ ದಿನ ಚೌಧರಿ ಚರಣ್‌ಸಿಂಗ್ ಭಾರತದ 5ನೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.

* 1794ರಲ್ಲಿ ಫ್ರೆಂಚ್ ಕ್ರಾಂತಿಯ ಭಾಗವಾಗಿ ‘ದಿ ಟೆರರ್’ ಗುಂಪಿನ ರೋಬ್ಸ್‌ಪಿರ್ರೆ ಮತ್ತು ಆತನ 22 ಸಹಚರರನ್ನು ಗಿಲೋಟಿನ್ ಯಂತ್ರಕ್ಕೆ ಬಲಿಕೊಡಲಾಯಿತು.

*1914ರ ಈ ದಿನ ಆಸ್ಟ್ರಿಯಾ ಮತ್ತು ಹಂಗರಿ ದೇಶಗಳು ಸೆರ್ಬಿಯಾದ ಮೇಲೆ ಯುದ್ಧ ಘೋಷಿಸಿದವು. ಹೀಗೆ ಪ್ರಥಮ ವಿಶ್ವ ಮಹಾಯುದ್ಧ ಆರಂಭಗೊಂಡಿತು.

*1943ರಲ್ಲಿ ಎರಡನೆ ವಿಶ್ವ ಮಹಾಯುದ್ಧದಲ್ಲಿ ಬ್ರಿಟಿಷರು ಜರ್ಮನಿ ಮೇಲೆ ಎಸೆದ ಹ್ಯಾಂಬರ್ಗ್ ಎಂಬ ಬಾಂಬ್‌ನಿಂದ 42,000 ಜರ್ಮನ್ ನಾಗರಿಕರು ಮೃತಪಟ್ಟರು.

*1946ರ ಈ ದಿನ ದಯಾಳು ಶಿಕ್ಷಕಿ, ಸಮಾಜ ಸೇವಕಿ ಸಿಸ್ಟರ್ ಅಲ್ಪೋನ್ಸಾ ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News