ಮಂಗಳೂರು: ಪಾರ್ಕಿಂಗ್ ಅತಿಕ್ರಮಣದ ವಿರುದ್ಧ ಮೇಯರ್ ಕಾರ್ಯಾಚರಣೆ ಶುರು

Update: 2017-07-28 06:21 GMT

ಮಂಗಳೂರು, ಜು.28: ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಪೂರಕ ಕಾರ್ಯಾಚರಣೆಯನ್ನು ಮನಪಾ ಮೇಯರ್ ಕವಿತಾ ಶುಕ್ರವಾರ ಬೆಳಗ್ಗೆಯಿಂದಲೇ ಆರಂಭಿಸಿದ್ದಾರೆ.

ನಗರದ ರಾವ್ ಆ್ಯಂಡ್ ರಾವ್ ರಸ್ತೆಯ ಮಿಷನ್ ಸ್ಟ್ರೀಟ್‌ನಲ್ಲಿ ಪಾರ್ಕಿಂಗ್ ಅತಿಕ್ರಮಣ ತೆರವು ಕಾರ್ಯಾಚರಣೆ ಇಂದು ಬೆಳಗ್ಗೆ ನಡೆಯಿತು. ಈ ವೇಳೆ ರಸ್ತೆ ಬದಿಯ 20 ಸೆಂಟ್ಸ್ ಜಾಗವನ್ನು ಅತಿಕ್ರಮಿಸಿ ನಿರ್ಮಿಸಿದ್ದೆನ್ನಲಾದ ಕಟ್ಟಡವನ್ನು ಜೇಸಿಬಿ ಬಳಸಿ ತೆರವುಗೊಳಿಸಲಾಯಿತು. ಅನಧಿಕೃತ ಪಾರ್ಕಿಂಗ್, ಗೂಡಂಡಿಗಳನ್ನು ಈ ವೇಳೆ ತೆರವುಗೊಳಿಸುವ ಮೂಲಕ ರಸ್ತೆ ಬದಿ ಫುಟ್‌ಪಾತ್ ಅನ್ನು ಅತಿಕ್ರಮಣಮುಕ್ತಗೊಳಿಸಲಾಯಿತು.

ಈ ವೇಳೆ ಕೆಲವು ಕಟ್ಟಡಗಳ ಮಾಲಕರು ತೆರವು ಕಾರ್ಯಾಚರಣೆಗೆ ಆಕ್ಷೇಪ ಕೂಡಾ ವ್ಯಕ್ತಪಡಿಸಿದರು.

ಕಾರ್ಯಾಚರಣೆಯ ವೇಳೆ ಮನಪಾ ಆಯುಕ್ತ ನಝೀರ್ ಉಪಸ್ಥಿತರಿದ್ದರು.

ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಪೂರಕವಾಗುವಂತೆ ಪ್ರಥಮ ಹಂತದಲ್ಲಿ ಪಿವಿಎಸ್‌ನಿಂದ ಸ್ಟೇಟ್‌ ಬ್ಯಾಂಕ್‌ವರೆಗೆ ಅನಧಿಕೃತ ಪಾರ್ಕಿಂಗ್, ಗೂಡಂಗಡಿಗಳ ತೆರವು ಕಾರ್ಯಾಚರಣೆ ಕುರಿತಂತೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಗರದ ವಾಹನ ಸಂಚಾರ ವ್ಯವಸ್ಥೆ ಕುರಿತು ನಡೆದ ಸಭೆಯಲ್ಲಿ ಮೇಯರ್ ತಿಳಿಸಿದ್ದರು. ಅದರಂತೆ ಈ ಕಾರ್ಯಾಚರಣೆ ಇಂದು ಬೆಳಗ್ಗೆಯಿಂದಲೇ ಆರಂಭಗೊಂಡಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News