ಜು.30: ಕೊಟ್ಟಾರಿ ಯುವ ವೇದಿಕೆ ಉದ್ಘಾಟನೆ, ಸಮಾವೇಶ

Update: 2017-07-28 12:00 GMT

ಮಂಗಳೂರು, ಜು. 28: ಕೊಟ್ಟಾರಿ ಯುವ ವೇದಿಕೆಯ ಉದ್ಘಾಟನೆ ಹಾಗೂ ಯುವ ಸಮಾವೇಶ, ವಿದ್ಯಾನಿಧಿ ಉದ್ಘಾಟನೆ ಕಾರ್ಯಕ್ರಮ ಜು.30ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೊಟ್ಟಾರಿ ಯುವ ವೇದಿಕೆ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ, ಸಮಾಜದ ಯುವಶಕ್ತಿಗಳನ್ನು ಸಮಾಜದ ಪರ ಚಟುವಟಿಕೆಗಳಿಗೆ ಇನ್ನಷ್ಟು ವೇಗ ಹಾಗೂ ಉತ್ತೇಜನವನ್ನು ನೀಡುವ ನಿಟ್ಟಿನಲ್ಲಿ ಕೊಟ್ಟಾರಿ ಯುವ ವೇದಿಕೆಯನ್ನು ಸ್ಥಾಪಿಸಲಾಗಿದೆ ಎಂದರು.

ವೇದಿಕೆಯ ಮೂಲಕ ಸಮಾಜದ ಬಾಂಧವರನ್ನು ಒಗ್ಗೂಡಿಸಿ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಿ ಉತ್ತಮ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ. ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ನೆರವಾಗುವ ನಿಟ್ಟಿನಲ್ಲಿ ಶಾಶ್ವತ ದೇಣಿಗೆದಾರರನ್ನೊಳಗೊಂಡ ವಿದ್ಯಾನಿಧಿಯನ್ನು ಸ್ಥಾಪಿಸಲಾಗಿದೆ ಎಂದರು.

ಅಂದು ಬೆಳಿಗ್ಗೆ 9 ಗಂಟೆಗೆ ನಗರದ ವಿಶ್ವವಿದ್ಯಾನಿಲಯ ಕಾಲೇಜು ಬಳಿಯಿಂದ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಕಾರ್ಯಕ್ರಮವನ್ನು ಕರಾವಳಿ ಸಮೂಹ ಸಂಸ್ಥೆ ಅಧ್ಯಕ್ಷ ಗಣೇಶ್ ರಾವ್ ಉದ್ಘಾಟಿಸಲಿದ್ದಾರೆ. ವಿದ್ಯಾನಿಧಿಯನ್ನು ಎಸ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಉದ್ಘಾಟಿಸುವರು. ಎಂ.ಪುರುಷೋತ್ತಮ ಕೊಟ್ಟಾರಿ ಅಧ್ಯಕ್ಷತೆ ವಹಿಸಲಿರುವರು. ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿರುವರು.

ಮುಖ್ಯ ಅತಿಥಿಗಳಾಗಿ ಸಂಸದ ನಳಿನ್‌ಕುಮಾರ್ ಕಟೀಲು, ಶಾಸಕ ಜೆ.ಆರ್.ಲೋಬೋ, ಮೇಯರ್ ಕವಿತಾ ಸನಿಲ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ, ಶ್ರೀ ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ, ಡಿ.ಆರ್.ಸುವರ್ಣ ಗ್ರೂಪ್ ನ ಆಡಳಿತ ನಿರ್ದೇಶಕ ಜಗದೀಪ್ ಸುವರ್ಣ, ನಟ ನವೀನ್ ಡಿ ಪಡೀಲ್, ವಾಸುದೇವ ಕೊಟ್ಟಾರಿ, ಕೆ.ಉಮನಾಥ ಕೊಟ್ಟಾರಿ, ಜಯಪ್ರಕಾಶ್ ವಾಮಂಜೂರು, ಡಾ. ಕಿಶೋರ್ ಕೊಟ್ಟಾರಿ ಮಣ್ಣಗುಡ್ಡ, ನೋಣಯ್ಯ ಕೊಟ್ಟಾರಿ, ಶ್ರೆನಿವಾಸ ಕೊಟ್ಟಾರಿ, ಪಿ.ನೇಮು ಕೊಟ್ಟಾರಿ, ಕೇಶವ ಕೊಟ್ಟಾರಿ, ಯೋಗೀಶ್ ಕೊಟ್ಟಾರಿ ಮೊದಲಾದವರು ಆಗಮಿಸಲಿರುವರು ಎಂದರು. 

ಬೆಳಗ್ಗೆ 11.30ಕ್ಕೆ ಸಾಮಾಜಿಕವಾಗಿ ಯುವ ಜನತೆ ಜವಾಬ್ದಾರಿ ಮತ್ತು ಕರ್ತವ್ಯಗಳು ಎಂಬ ವಿಷಯವಾಗಿ ವಿಚಾರ ಸಂಕಿರಣ, ಮಧ್ಯಾಹ್ನ 12.30ಕ್ಕೆ ಮೋಹನ್‌ದಾಸ್ ಕೊಟ್ಟಾರಿ ಮುನ್ನೂರು ಸಂಯೋಜನೆಯಲ್ಲಿ ತುಳುನಾಡ ಐಸಿರಿ ಕಾರ್ಯಕ್ರಮ, ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ, ಸಂಜೆ 5.30ಕ್ಕೆ ಮ್ಯಾಜಿಕ್ ಶೋ, ಸಂಜೆ 6.30ಕ್ಕೆ ಕೊಟ್ಟಾರಿ ಪೊರ್ಲು ಕಾಂಟೆಸ್ಟ್-2017, ರಾತ್ರಿ 7 ಗಂಟೆಗೆ ಕೊಟ್ಟಾರಿ ಯುವ ಸಮಾಜ ಬಾಂಧವರಿಂದ ಯಕ್ಷಗಾನ ವೈಭವ ಶಾಂಭವಿ ವಿಜಯ ನಡೆಯಲಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಉಪಾಧ್ಯಕ್ಷ ಸೌರಭ್ ಕೊಟ್ಟಾರಿ ಬೋಳಾರ, ಪ್ರಧಾನ ಕಾರ್ಯದರ್ಶಿ ಶುಕರಾಜ್ ಎಸ್.ಕೊಟ್ಟಾರಿ, ಜೊತೆ ಕಾರ್ಯದರ್ಶಿ ಜ್ಞಾನ ಕೊಟ್ಟಾರಿ ಅತ್ತಾವರ, ಕೋಶಾಧಿಕಾರಿ ರಾಜೇಶ್ ಕೊಟ್ಟಾರಿ ಮೂಡುಶೆಡ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News