ಅಮೆರಿಕದ ಆರ್ಥಿಕ ದಿಗ್ಬಂಧನೆಗೆ ಇರಾನ್ ಖಂಡನೆ

Update: 2017-07-29 16:15 GMT

ಟೆಹರಾನ್, ಜು. 29: ತನ್ನ ಕ್ಷಿಪಣಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಮೆರಿಕದ ಕಾಂಗ್ರೆಸ್ ತನ್ನ ಮೇಲೆ ವಿಧಿಸಿರುವ ನೂತನ ಆರ್ಥಿಕ ದಿಗ್ಬಂಧನಗಳನ್ನು ಇರಾನ್ ಶನಿವಾರ ಖಂಡಿಸಿದೆ.

ಕಾಂಗ್ರೆಸ್‌ನ ನಿರ್ಣಯಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ ಬಳಿಕ ಅದು ಕಾನೂನಾಗಲಿದೆ. ನಿರ್ಣಯಕ್ಕೆ ಸಹಿ ಹಾಕುವುದಾಗಿ ಟ್ರಂಪ್ ಈಗಾಗಲೇ ಘೋಷಿಸಿದ್ದಾರೆ.

‘‘ನಮ್ಮ ಕ್ಷಿಪಣಿ ಕಾರ್ಯಕ್ರಮವನ್ನು ನಾವು ಪೂರ್ಣ ಶಕ್ತಿಯಿಂದ ಮುಂದುವರಿಸುತ್ತೇವೆ’’ ಎಂದು ವಿದೇಶ ಸಚಿವಾಲಯದ ವಕ್ತಾರ ಬಹ್ರಾಂ ಘಸೆಮಿ ಸರಕಾರಿ ಟೆಲಿವಿಶನ್ ಐಆರ್‌ಐಬಿಗೆ ತಿಳಿಸಿದರು.

‘‘ಪ್ರತಿಕೂಲ ಮತ್ತು ಅಸ್ವೀಕಾರಾರ್ಹ ಕೃತ್ಯವನ್ನು ನಾವು ಖಂಡಿಸುತ್ತೇವೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News