×
Ad

ಚೀನಾ: ಮೀತೇನ್ ಹೈಡ್ರೇಟ್‌ನಿಂದ ನೈಸರ್ಗಿಕ ಅನಿಲ

Update: 2017-07-29 22:16 IST

ಬೀಜಿಂಗ್, ಜು. 29: ದಕ್ಷಿಣ ಚೀನಾ ಸಮುದ್ರದಲ್ಲಿ ಕೈಗೆತ್ತಿಕೊಳ್ಳಲಾದ ಪ್ರಾಯೋಗಿಕ ಯೋಜನೆಯೊಂದರಲ್ಲಿ, ‘ದಹನಶೀಲ ಮಂಜುಗಡ್ಡೆ’ ಎಂದೇ ಕರೆಯಲ್ಪಡುವ ಮೀತೇನ್ ಹೈಡ್ರೇಟ್‌ನಿಂದ ನೈಸರ್ಗಿಕ ಅನಿಲವನ್ನು ಉತ್ಪಾದಿಸುವಲ್ಲಿ ಚೀನಾ ಯಶಸ್ವಿಯಾಗಿದೆ ಎಂದು ಚೀನಾದ ಭೂ ಮತ್ತು ಸಂಪನ್ಮೂಲಗಳ ಸಚಿವಾಲಯ ಶನಿವಾರ ಹೇಳಿದೆ.

ಆಗ್ನೇಯ ಚೀನಾದ ನಗರ ಝುಹೈ ಕರಾವಳಿಯಲ್ಲಿ ನಿಯೋಜಿಸಲಾದ ಕೊರೆಯುವ ಯಂತ್ರವೊಂದು 60 ದಿನಗಳಲ್ಲಿ 3,09,000 ಕ್ಯೂಬಿಕ್ ಮೀಟರ್ ನೈಸರ್ಗಿಕ ಅನಿಲವನ್ನು ಉತ್ಪಾದಿಸಿದೆ.

ಇದು ಅನಿಲ ರೂಪದ ಮೀತೇನ್ ಹೈಡ್ರೇಟ್‌ನಿಂದ ಉತ್ಪಾದಿಸಲಾದ ದಾಖಲೆ ಪ್ರಮಾಣದ ನೈಸರ್ಗಿಕ ಅನಿಲವಾಗಿದೆ ಎಂದು ಸಚಿವಾಲಯವು ತನ್ನ ವೆಬ್‌ಸೈಟ್‌ನಲ್ಲಿ ಹಾಕಿದ ಸೂಚನೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News