×
Ad

ಮಅದನಿಗೆ ಪುತ್ರನ ವಿವಾಹದಲ್ಲಿ ಪಾಲ್ಗೊಳ್ಳಲು ಸುಪ್ರಿಂ ಕೋರ್ಟ್ ನಿರಾಕರಣೆ

Update: 2017-07-29 22:21 IST

ಕೊಚ್ಚಿ, ಜು. 29: ಬೆಂಗಳೂರಿನಲ್ಲಿ 2008ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಆರೋಪಿಯಾಗಿರುವ ಕೇರಳದ ಪಿಡಿಪಿ ನಾಯಕ ಅಬ್ದುಲ್ ನಾಸರ್ ಮಅದನಿ, ತನ್ನ ಪುತ್ರನ ವಿವಾಹದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಜುಲೈ 31ರಂದು ವಿಚಾರಣೆಗೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ಒಪ್ಪಿಕೊಂಡಿದೆ.

 ಮನವಿ ಬಗ್ಗೆ ತತ್‌ಕ್ಷಣ ವಿಚಾರಣೆ ನಡೆಸಬೇಕೆಂದು ನ್ಯಾಯವಾದಿ ಹ್ಯಾರಿಸ್ ಬೀರನ್ ಕೋರಿದ ಬಳಿಕ ನ್ಯಾಯಮೂರ್ತಿ ಜೆ.ಎಸ್. ಖೆಹರ್ ನೇತೃತ್ವದ ನ್ಯಾಯಪೀಠ, ವಿಷಯವನ್ನು ಪಟ್ಟಿ ಮಾಡಿ ಎಂದು ನಿರ್ದೇಶಿಸಿದೆ.

ಆಗಸ್ಟ್ 8ರಿಂದ 20ರ ವರೆಗೆ ನಡೆಯಲಿರುವ ಪುತ್ರನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಅನುಮತಿ ನಿರಾಕರಿಸಿ ವಿಚಾರಣಾ ನ್ಯಾಯಾಲಯ ಜುಲೈ 24ರಂದು ನೀಡಿದ ತೀರ್ಪು ಪ್ರಶ್ನಿಸಿ 51 ವರ್ಷದ ಮದನಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾರೆ.

ಅನಾರೋಗ್ಯಕ್ಕೆ ಒಳಗಾದ ತಾಯಿಯನ್ನು ಭೇಟಿಯಾಗಲು ಆಗಸ್ಟ್ 1ರಿಂದ 7ರ ವರೆಗೆ ವಿಚಾರಣಾ ನ್ಯಾಯಾಲಯದ ಮದನಿಗೆ ಅವಕಾಶ ನೀಡಿತ್ತು. ಆದರೆ, ಆಗಸ್ಟ್ 9ರಂದು ನಡೆಯುವ ಪುತ್ರನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಳು ಅನುಮತಿ ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News