×
Ad

ನಕ್ಕ ಕಾರಣಕ್ಕಾಗಿ ಪತ್ನಿಯನ್ನೇ ಕೊಂದು ಹಾಕಿದ ಭೂಪ

Update: 2017-07-30 16:57 IST

ಸಾನ್‍ಫ್ರಾನ್ಸಿಸ್ಕೊ, ಜು. 30: ಅಮೆರಿಕದ ಅಲಾಸ್ಕದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ನಕ್ಕ ಕಾರಣ ಕೋಪಗೊಂಡು ಆಕೆಯನ್ನು ಕೊಂದು ಹಾಕಿದ ಘಟನೆ ನಡೆದಿದೆ. ಕೊಲೆಯಾದ ಮಹಿಳೆಯನ್ನು ಕ್ರಿಸ್ಟಿ ಮಂಜಾನರೆಸ್ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ  ಕ್ರಿಸ್ಟಿಯ ಪತಿ ಕೆನೆತ್ ಮಂಜಾನರೇಸ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಕೋರ್ಟಿನಲ್ಲಿ ಪ್ರದರ್ಶಿಸಿದ ಡಾಕ್ಯುಮೆಂಟರಿಯಲ್ಲಿ ಕೆನೆತ್‍ನನ್ನು ಬಂಧಿಸುವಾಗ ಅತನ ಬಟ್ಟೆಯಲ್ಲಿ ರಕ್ತವಿತ್ತು. ಕೋರ್ಟು ಕೆನೆತ್‍ನಿಗೆ ನೀಡಿದ ವಕೀಲರು ಈ ಕುರಿತು ಯಾವುದೇ ಹೇಳಿಕೆ ನೀಡಲಿಲ್ಲ. ಕೆನೆತ್‍ನಲ್ಲಿ ಕೋರ್ಟು ಪತ್ನಿಯನ್ನು ಯಾಕೆ ಕೊಂದೆ ಎಂದು ಕೇಳಿದಾಗ " ಅವಳು ನನ್ನನ್ನು ನೋಡಿ ನಗುವುದು ನಿಲ್ಲಿಸಲಿಲ್ಲ" ಎಂದು ಕಾರಣ ನೀಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News