×
Ad

ಬೋಫೋರ್ಸ್ ಹಗರಣ: ಕಾಣೆಯಾದ ಫೈಲ್‌ಗಳ ಪತ್ತೆಗೆ ಸೂಚನೆ

Update: 2017-07-30 22:35 IST

ಹೊಸದಿಲ್ಲಿ, ಜು.30: ಬೋಫೋರ್ಸ್ ಹಗರಣಕ್ಕೆ ಸಂಬಂಧಿಸಿ ಕಾಣೆಯಾಗಿರುವ ಎಲ್ಲಾ ಫೈಲ್‌ಗಳನ್ನು ಪತ್ತೆಹಚ್ಚಿ ಅದರ ಮಾಹಿತಿ ನೀಡುವಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ರಕ್ಷಣಾ ಸಚಿವಾಲಯಕ್ಕೆ ಸೂಚಿಸಿದೆ.

 ನಿಯಂತ್ರಕ ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯ ಕೆಲವು ಪ್ಯಾರಾಗಳಿಗೆ ಸಂಬಂಧಿಸಿದ ಫೈಲ್‌ಗಳು ಕಾಣೆಯಾಗಿರುವ ಕಾರಣ ಇವನ್ನು ಕೈಬಿಡಬೇಕು ಎಂದು ರಕ್ಷಣಾ ಸಚಿವಾಲಯದ ಸಲಹೆಗೆ ಪಿಎಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ತಿಂಗಳ ಆರಂಭದಲ್ಲಿ ನಡೆದ ಸಭೆಯಲ್ಲಿ ಬೋಫೋರ್ಸ್ ಒಪ್ಪಂದಕ್ಕೆ ಸಂಬಂಧಿಸಿದ ಕೆಲವೊಂದು ಫೈಲ್‌ಗಳು ಕಾಣೆಯಾಗಿದ್ದು ಇವನ್ನು ಪತ್ತೆಹಚ್ಚಲು ಮತ್ತು ಇದರ ಮಾಹಿತಿ ನೀಡು ಅಗತ್ಯದ ಬಗ್ಗೆ ಒತ್ತಿಹೇಳಲಾಗಿದೆ.

 ಬೊಫೋರ್ಸ್ ಬಗ್ಗೆ ಸಿಎಜಿ ವರದಿ ಪಿಎಸಿ ಎದುರು ಸುದೀರ್ಘಾವಧಿಯಿಂದ ವಿಚಾರಣೆಗೆ ಬಾಕಿಯಿದೆ. ಸೇನೆಗೆ ಹೊವಿಟ್ಝರ್ ತೋಪುಗಳನ್ನು ಖರೀದಿಸಿದ ಪ್ರಕ್ರಿಯೆಯಲ್ಲಿ ಭಾರೀ ಮೊತ್ತದ ಕಮಿಷನ್ ಮಧ್ಯವರ್ತಿಗಳಿಗೆ ಸಂದಾಯವಾಗಿದೆ ಎಂಬ ಆರೋಪ ಭಾರೀ ರಾಜಕೀಯ ಬಿರುಗಾಳಿಗೆ ಕಾರಣವಾಗಿತ್ತು ಮತ್ತು ಇದು 1989ರಲ್ಲಿ ರಾಜೀವ್‌ಗಾಂಧಿ ಸರಕಾರದ ಪತನಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News