×
Ad

ಚೀನಿ ಸರಕುಗಳು ಭಾರತದ ಸರಕುಗಳಿಗಿಂತ ಅಗ್ಗವೇಕೆ?

Update: 2017-07-31 18:57 IST

ಹೊಸದಿಲ್ಲಿ,ಜು.31: ಚೀನಾದಲ್ಲಿರುವ ಅಪಾರದರ್ಶಕ ಸಬ್ಸಿಡಿ ಪದ್ಧತಿ ಮತ್ತು ತಿರುಚಿದ ಉತ್ಪಾದನಾ ಬೆಲೆಗಳು ಆ ದೇಶದ ಉತ್ಪನ್ನಗಳು ಭಾರತದ ಉತ್ಪನ್ನಗಳಿಗಿಂತ ಅಗ್ಗವಾಗಿ ದೊರೆಯಲು ಪ್ರಮುಖ ಕಾರಣಗಳಾಗಿವೆ ಎಂದು ಸರಕಾರವು ಸೋಮವಾರ ಲೋಕಸಭೆಯಲ್ಲಿ ತಿಳಿಸಿದೆ.

ಸಹಾಯಕ ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್‌ಎಂಇ)ಗಳ ಸಚಿವ ಹರಿಭಾಯಿ ಪಾರ್ಥಿಭಾಯಿ ಚೌಧರಿ ಅವರು ಲಿಖಿತ ಉತ್ತರವೊಂದರಲ್ಲಿ ಇದನ್ನು ತಿಳಿಸಿದರು.

 ಎಂಎಸ್‌ಎಂಇಗಳ ಉಳಿವು ಮತ್ತು ಬೆಳವಣಿಗೆ ಸಕಾಲಕ್ಕೆ ಸಾಲ ಲಭ್ಯತೆ, ತಂತ್ರಜ್ಞಾನ ವನ್ನು ಮೇಲ್ದರ್ಜೆಗೇರಿಸುವಿಕೆ, ಮೂಲಸೌಕರ್ಯ, ಮಾರುಕಟ್ಟೆ ಅವಕಾಶ, ಉತ್ಪನ್ನಗಳ ಗುಣಮಟ್ಟ ಸೇರಿದಂತೆ ಹಲವಾರು ಅಂಶಗಳನ್ನು ಅವಲಂಬಿಸಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸುತ್ತ ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News