×
Ad

ಪರಿಸರ ಪರವಾನಿಗೆಗೆ ಕಾಯುತ್ತಿರುವ ಹಲವು ಯೋಜನೆಗಳು: ಕೇಂದ್ರ ಸಚಿವ ಹರ್ಷವರ್ಧನ್

Update: 2017-07-31 22:36 IST

ಹೊಸದಿಲ್ಲಿ, ಜು.31: ದೇಶದ ವಿವಿಧೆಡೆ 741 ಯೋಜನೆಗಳು ಪರಿಸರ ಇಲಾಖೆಯ ಪರವಾನಿಗೆಗೆ ಕಾಯುತ್ತಿವೆ ಎಂದು ಕೇಂದ್ರ ಪರಿಸರ ಖಾತೆ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

  ಇದರಲ್ಲಿ ಮಹಾರಾಷ್ಟ್ರ ರಾಜ್ಯದಿಂದ ಗರಿಷ್ಠ ಅಂದರೆ 194 ಯೋಜನೆಗಳು, ಗುಜರಾತ್‌ನಿಂದ 95, ಉತ್ತರಪ್ರದೇಶದಿಂದ 86 ಯೋಜನೆಗಳು ಅನುಮತಿಗೆ ಕಾಯುತ್ತಿವೆ ಎಂದು ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಅವರು ತಿಳಿಸಿದ್ದಾರೆ. ಈ ಯೋಜನೆಗಳಿಗೆ ಪರಿಸರ ಇಲಾಖೆಯಿಂದ ಶೀಘ್ರ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದರು.

 ಅರಣ್ಯ ಆಧಾರಿತ ಯೋಜನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 2014ರಿಂದ 2017ರ ವರೆಗಿನ ಅವಧಿಯಲ್ಲಿ 2,196 ಪ್ರಸ್ತಾವನೆಗಳಿಗೆ ಮೊದಲ ಹಂತದ ಅಥವಾ ಮೂಲ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು. ಅರಣ್ಯ ಸಂರಕ್ಷಣೆ ಕಾಯ್ದೆಯನ್ವಯ 357 ಪ್ರಕರಣಗಳು ಕೇಂದ್ರ ಸರಕಾರದ ಅನುಮೋದನೆಗೆ ಕಾಯುತ್ತಿವೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News