ನೀತಿ ಆಯೋಗ ತೊರೆದು ಶಿಕ್ಷಣ ಕ್ಷೇತ್ರಕ್ಕೆ ಮರಳಲು ಪನಗರಿಯಾ ನಿರ್ಧಾರ

Update: 2017-08-01 13:05 GMT

ಹೊಸದಿಲ್ಲಿ,ಆ.1: ನೀತಿ ಆಯೋಗದ ಉಪಾಧ್ಯಕ್ಷ ಹುದ್ದೆಯನ್ನು ತೊರೆಯಲು ಅರವಿಂದ ಪನಗರಿಯಾ ನಿರ್ಧರಿಸಿದ್ದಾರೆ. ತನಗೆ ಕೊಲಂಬಿಯಾ ವಿವಿಯಿಂದ ರಜೆ ವಿಸ್ತರಣೆ ದೊರೆಯುತ್ತಿಲ್ಲವಾದ್ದರಿಂದ ಆ.31ರೊಳಗೆ ತನ್ನನ್ನು ಕರ್ತವ್ಯದಿಂದ ಬಿಡುಗಡೆ ಗೊಳಿಸುವಂತೆ ಕೋರಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದಾರೆ.

ಖುದ್ದು ಪನಗರಿಯಾ ಅವರೇ ಮಂಗಳವಾರ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು.

ಭಾರತೀಯ-ಅಮೆರಿಕನ್ ಅರ್ಥಶಾಸ್ತ್ರಜ್ಞ ಹಾಗೂ ಕೊಲಂಬಿಯಾ ವಿವಿಯಲ್ಲಿ ಭಾರತೀಯ ರಾಜಕೀಯ ಆರ್ಥಿಕತೆಯ ಪ್ರೊಫೆಸರ್ ಆಗಿರುವ ಪನಗರಿಯಾ 2015ರಲ್ಲಿ ಯೋಜನಾ ಆಯೋಗದ ಬದಲಿಗೆ ಅಸ್ತಿತ್ವಕ್ಕೆ ಬಂದಿದ್ದ ನೀತಿ ಆಯೋಗದ ಮೊದಲ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಮೋದಿ ನೀತಿ ಆಯೋಗದ ಅಧ್ಯಕ್ಷರಾಗಿದ್ದಾರೆ.

ಭಾರತ ಸರಕಾರವು 2012ರಲ್ಲಿ ಪನಗರಿಯಾ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News