ಸಿಂಗಾಪುರ: ದರೋಡೆ ನಡೆಸಿದ ಭಾರತೀಯನ ಬಂಧನ
Update: 2017-08-02 19:51 IST
ಸಿಂಗಾಪುರ, ಆ. 2: ಸಿಂಗಾಪುರದಲ್ಲಿರುವ ಭಾರತ ಮೂಲದ ವ್ಯಕ್ತಿಯೊಬ್ಬ ಚೂರಿ ತೋರಿಸಿ ಪೆಟ್ರೋಲ್ ಪಂಪೊಂದರ ಉದ್ಯೋಗಿಯೋರ್ವರನ್ನು ದರೋಡೆ ಮಾಡಿದ್ದಾನೆ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ.
48 ವರ್ಷದ ವಿಶ್ವನಾಥನ್ ವಡುವೇಲು ಸೋಮವಾರ ಇಲ್ಲಿನ ಅಪ್ಪರ್ ಬುಕಿಟ್ ತಿಮಾಹ್ ರಸ್ತೆಯಲ್ಲಿರುವ ಶೆಲ್ ಪೆಟ್ರೋಲ್ ಪಂಪ್‌ನಿಂದ 1,193 ಸಿಂಗಾಪುರ ಡಾಲರ್ (ಸುಮಾರು 55,850 ರೂಪಾಯಿ) ದರೋಡೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಹಗಲಿನಲ್ಲಿ ನಡೆದ ಈ ಘಟನೆ 10 ವರ್ಷಗಳಲ್ಲೇ ಮೊದಲು ಎಂದು ಪೊಲೀಸರು ಹೇಳಿದರು. ಸಂಜೆಯ ಹೊತ್ತಿಗೆ ಪೊಲೀಸರು ಆತನನ್ನು ಬಂಧಿಸಿದರು.