×
Ad

ಜಡಿಮಳೆಯಲ್ಲಿ ಕೊಡೆ ಅಡಿ ನಿಂತು ಗಿಡಗಳಿಗೆ ನೀರು!

Update: 2017-08-03 19:07 IST

ಜಾರ್ಖಂಡ್, ಆ.3: ಇತ್ತೀಚಿನ ದಿನಗಳಲ್ಲಿ ಜಾರ್ಖಂಡ್ ಸಚಿವ ಸಿ.ಪಿ. ಸಿಂಗ್ ರ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ, ಜಾರ್ಖಂಡ್ ಸರಕಾರದ ಸಾರಿಗೆ ಸಚಿವರಾಗಿರುವ ಸಿ.ಪಿ.ಸಿಂಗ್ ಫೋಟೊವೊಂದನ್ನು ಶೇರ್ ಮಾಡಿದ್ದರು. ಅವರು ಗಿಡಗಳಿಗೆ ನೀರು ಹಾಕುತ್ತಿರುವ ಫೋಟೊಗಳೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನಗೆಪಾಟಲಿಗೀಡಾಗಿರುವುದು.

ಜಡಿಮಳೆಯಲ್ಲಿ ಗಿಡಗಳಿಗೆ ಸಿ.ಪಿ. ಸಿಂಗ್ ಗಿಡಗಳಿಗೆ ನೀರು ಹಾಕುತ್ತಿದ್ದು, ಅವರಿಗೆ ಸಿಆರ್ ಪಿಎಫ್ ಸಿಬ್ಬಂದಿ ಕೊಡೆ ಹಿಡಿದಿರುವ ಫೋಟೊವನ್ನು ಸ್ವತಃ ಸಿ.ಪಿ. ಸಿಂಗ್ ಪೋಸ್ಟ್ ಮಾಡಿದ್ದರು.

ಆದರೆ ಈ ಫೋಟೊವನ್ನು ಪೋಸ್ಟ್ ಮಾಡುವ ಸಂದರ್ಭ ಸಚಿವರಿಗೆ ಅಲ್ಪ ಬುದ್ಧಿಮತ್ತೆಯೂ ಇರಲಿಲ್ಲವೇನೋ ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಪ್ರಶ್ನಿಸುತ್ತಿದ್ದಾರೆ. ಜಡಿ ಮಳೆ ಸುರಿಯುತ್ತಿರುವ ನಡುವೆ ಗಿಡಗಳಿಗೆ ನೀರು ಹಾಕುವ ಅಗತ್ಯವಿತ್ತೇ ಎಂದು ಹಲವರು ಪ್ರಶ್ನಿಸಿದ್ದಾರೆ.

ಈ ಫೋಟೊ ಕುರಿತಂತೆ ಕೆಲವು ಟ್ವೀಟ್ ಗಳು ಹೀಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News