ಕೆನಡದ ಅಗ್ರ 3 ವಲಸಿಗ ಭಾಷೆಯಲ್ಲಿ ಪಂಜಾಬಿ

Update: 2017-08-03 14:04 GMT

ಒಟ್ಟಾವ (ಕೆನಡ), ಆ. 3: ಕೆನಡದಲ್ಲಿ ಮಾತನಾಡಲಾಗುತ್ತಿರುವ ವಲಸಿಗ ಭಾಷೆಗಳ ಪೈಕಿ ಪಂಜಾಬಿ ಅಗ್ರ ಮೂರರ ಸ್ಥಾನದಲ್ಲಿದೆ ಹಾಗೂ ಕಳೆದ ಐದು ವರ್ಷಗಳ ಅವಧಿಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಲಸಿಗ ಭಾಷೆಗಳ ಪೈಕಿ ಹಿಂದಿಯೂ ಸೇರಿದೆ ಎಂದು ದೇಶದ ಜನಗಣತಿ ಅಂಕಿಸಂಖ್ಯೆಗಳು ಹೇಳಿವೆ.

  ಕೆನಡವು ತನ್ನ ಎರಡು ಅಧಿಕೃತ ಭಾಷೆಗಳಾದ ಇಂಗ್ಲಿಷ್ ಮತ್ತು ಫ್ರೆಂಚ್‌ಗೆ ಹೊರತಾಗಿ, ವಲಸಿಗರ ಮೂಲಕ ದೇಶಕ್ಕೆ ಬಂದಿರುವ ಜನರ ಭಾಷೆಗಳನ್ನು ವಲಸಿಗ ಭಾಷೆ ಎಂಬುದಾಗಿ ಪರಿಗಣಿಸುತ್ತಿದೆ.

‘‘ಕೆನಡದಲ್ಲಿ ಭಾಷಾ ವೈವಿಧ್ಯತೆ ಏರುಗತಿಯಲ್ಲಿದೆ. 2016ರಲ್ಲಿ ಸುಮಾರು 76 ಲಕ್ಷ ಕೆನಡಿಯನ್ನರು ಮನೆಯಲ್ಲಿ ಇಂಗ್ಲಿಷ್ ಅಥವಾ ಫ್ರೆಂಚ್‌ಗೆ ಹೊರತಾಗಿ ಇನ್ನೊಂದು ಭಾಷೆಯನ್ನು ಮಾತನಾಡುತ್ತಿದ್ದಾರೆ. ಇದು 2011ಕ್ಕೆ ಹೋಲಿಸಿದರೆ ಸುಮಾರು ಒಂದು ಲಕ್ಷ (14.5 ಶೇಕಡ)ದಷ್ಟು ಹೆಚ್ಚಾಗಿದೆ’’ ಎಂದು 2016ರ ಜನಗಣತಿಯನ್ನು ಉಲ್ಲೇಖಿಸಿ ಸರಕಾರಿ ಸಂಸ್ಥೆ ‘ಸ್ಟಾಟ್‌ಕ್ಯಾನ್’ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

ಮಾತೃಭಾಷೆಯಾಗಿ ಮನೆಯಲ್ಲಿ ಮಾತನಾಡಲ್ಪಡುವ ವಲಸಿಗ ಭಾಷೆಗಳ ಪೈಕಿ ಮ್ಯಾಂಡರಿನ್ (ಚೀನೀ ಭಾಷೆ) ಮತ್ತು ಕಾಂಟೋನೀಸ್ (ಚೀನಾದ ಇನ್ನೊಂದು ಭಾಷೆ) ಮೊದಲೆರಡು ಸ್ಥಾನಗಳಲ್ಲಿವೆ.

ಪಂಜಾಬಿ ಮಾತನಾಡುವವರ ಸಂಖ್ಯೆ 2011ರ ಬಳಿಕ 18 ಶೇಕಡದಷ್ಟು ಹೆಚ್ಚಿದ್ದು, ಈಗ ಅವರ ಸಂಖ್ಯೆ 5,68,375.

ವಲಸಿಗ ಭಾಷೆಗಳ ಅಗ್ರ 22ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಇನ್ನೊಂದು ಭಾಷೆ ತಮಿಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News