ಅಮೆರಿಕ ವೀಸಾಕ್ಕೆ ಸಾಮಾಜಿಕ ಮಾಧ್ಯಮ ವಿವರ ಕಡ್ಡಾಯ
Update: 2017-08-04 21:26 IST
ವಾಶಿಂಗ್ಟನ್, ಆ. 4: ಅಮೆರಿಕ ವೀಸಾಗಳಿಗೆ ಅರ್ಜಿ ಸಲ್ಲಿಸುವವರ ಪೈಕಿ ಕೆಲವರು ತಮ್ಮ ಸಾಮಾಜಿಕ ಮಾಧ್ಯಮ ಮತ್ತು ಜೈವಿಕ ವಿವರಗಳು ಹಾಗೂ ಪ್ರಯಾಣ ಇತಿಹಾಸವನ್ನು ಒದಗಿಸಬೇಕೆಂದು ಸೂಚಿಸುವ ಪ್ರಶ್ನಾವಳಿಯನ್ನು ಖಾಯಂಗೊಳಿಸುವ ಇಂಗಿತವನ್ನು ಟ್ರಂಪ್ ಆಡಳಿತ ಗುರುವಾರ ವ್ಯಕ್ತಪಡಿಸಿದೆ.
ಅಮೆರಿಕ ಪ್ರವೇಶಿಸುವವರ ತಪಾಸಣೆಯನ್ನು ಬಿಗಿಗೊಳಿಸುವ ಪ್ರಯತ್ನಗಳ ಭಾಗವಾಗಿ ಮೇ ತಿಂಗಳಲ್ಲಿ ಟ್ರಂಪ್ ಆಡಳಿತ ಈ ಪ್ರಶ್ನಾವಳಿಯನ್ನು ಜಾರಿಗೆ ತಂದಿತ್ತು. ಹಿಂದಿನ ಎಲ್ಲ ಪಾಸ್‌ಪೋರ್ಟ್ ಸಂಖ್ಯೆಗಳು, ಐದು ವರ್ಷಗಳ ಸಾಮಾಜಿಕ ಮಾಧ್ಯಮ ವಿವರಗಳು, ಇಮೇಲ್ ವಿಳಾಸಗಳು ಮತ್ತು ಫೋನ್ ಸಂಖ್ಯೆಗಳು ಹಾಗೂ ವಿಳಾಸಗಳು, ಉದ್ಯೋಗ ಮತ್ತು ಪ್ರಯಾಣ ಇತಿಹಾಸ ಸೇರಿದಂತೆ 15 ವರ್ಷಗಳ ಜೈವಿಕ ಮಾಹಿತಿಯನ್ನು ಈ ಪ್ರಶ್ನಾವಳಿಯು ಬಯಸುತ್ತದೆ.