ವಾನಾಕ್ರೈ ವೈರಸ್ ನಿಷ್ಕ್ರಿಯಗೊಳಿಸಿದ ಹ್ಯಾಕರ್‌ಗೆ ಜಾಮೀನು
ಲಾಸ್‌ವೆಗಾಸ್,ಆ.5: ಬ್ಯಾಂಕಿಂಗ್ ಹಾಗೂ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಕದಿಯಲು ಬಳಸುವ ಕೋಡ್‌ನ ಬಗ್ಗೆ ಜಾಹೀರಾತು ನೀಡಿದ ಹಾಗೂ ಅದನ್ನು ಮಾರಾಟ ಮಾಡಿದ ಆರೋಪ ಎದುರಿಸುತ್ತಿರುವ ಬ್ರಿಟನ್‌ನ ಸೈಬರ್ ಭದ್ರತಾ ತಜ್ಞನನ್ನು ಅಮೆರಿಕದ ಲಾಸ್‌ವೆಗಾಸ್‌ನ ನ್ಯಾಯಾಲಯವೊಂದು 30 ಸಾವಿರ ಡಾಲರ್ ಭದ್ರತಾ ಖಾತರಿ ಪಡೆದು ಜಾಮೀನು ನೀಡಿದೆ.
23 ವರ್ಷದ ಆರೋಪಿ ಮಾರ್ಕಸ್ ಹ್ಯುಚಿನ್ಸ್, ಕಳೆದ ಮೇನಲ್ಲಿೆ ಸೈಬರ್‌ಜಗತ್ತಿನಲ್ಲಿ ಕೋಲಾಹಲವೆಬ್ಬಿಸಿದ ‘ವಾನ್ನಾ ಕ್ರೈ’ ರ್ಯಾನ್ಸಮ್‌ವೇರ್ ವೈರಸನ್ನು ನಿಷ್ಕ್ರಿಯಗೊಳಿಸುವ ಮೂಲಕ ಹ್ಯಾಕರ್ ಸಮುದಾಯದಲ್ಲಿ ಜನಪ್ರಿಯತೆ ಗಳಿಸಿದ್ದರು.
ಹ್ಯುಚಿನ್ಸ್ ವಿಮಾನಯಾನ ಮಾಡಿದಲ್ಲಿ ವೈಮಾನಿಕ ಭದ್ರತೆಗೆ ಅಪಾಯಕಾರಿಯಾಗಲಿದ್ದಾರೆಂಬ ಪ್ರಾಸಿಕ್ಯೂಶನ್ ವಾದವನ್ನು ನ್ಯಾಯಾಧೀಶೆ ನ್ಯಾನ್ಸಿ ಕೊಪ್ ತಳ್ಳಿಹಾಕಿದ್ದಾರೆ. ಹ್ಯುಚಿನ್ಸ್ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ಅವರು ಕಂಪ್ಯೂಟರ್ ಬಳಸುವುದನ್ನು ಹಾಗೂ ಇಂಟರ್‌ನೆಟ್ ಸಂಪರ್ಕ ಪಡೆಯುವುದನ್ನು ನಿಷೇಧಿಸಲಾಗಿದೆ.
ಹ್ಯುಚೆನ್ಸ್ ಅವರು ಜುಲೈ 2014 ಹಾಗೂ 2015ರ ನಡುವೆ ‘ಕ್ರೊನೊಸ್‌ಐ ಎಂಬ ಮಾಲ್‌ವೇರ್ ಕೋಡ್ ಬಗ್ಗೆ ಪ್ರಚಾರ ಹಾಗೂ ಮಾರಾಟ ಮಾಡಿ, ಕೋಟ್ಯಂತರ ಡಾಲರ್ ಸಂಪಾದಿಸಿದ್ದರು. ಒಂದು ವೇಳೆ ಕ್ರೊನೊಸ್ ಮಾಲ್‌ವೇರ್ ಅನ್ನು ಇಮೇಲ್ ಮೂಲಕ ಸ್ವೀಕರಿಸಿದಲ್ಲಿ ಅವರ ಬ್ಯಾಂಕಿಂಗ್ ಹಾಗೂ ಕ್ರೆಡಿಟ್ ಖಾತೆಯ ವಿವರಗಳು ಲಭ್ಯವಾಗುವುದರಿಂದ ಅವುಗಳನ್ನು ಬಳಸಿಕೊಂಡು ಅವರ ಬ್ಯಾಂಕ್‌ಖಾತೆಯಲ್ಲಿರುವ ಹಣವನ್ನು ಲಪಟಾಯಿಸಬಹುದಾಕಿತ್ತು.