ಇಮ್ರಾನ್ ಖಾನ್ ವಿರುದ್ಧ ತನಿಖೆಗೆ ವಿಶೇಷ ಸಮಿತಿ
ಇಸ್ಲಾಮಾಬಾದ್, ಆ.5: ಪಾಕಿಸ್ತಾನದ ಪ್ರತಿಪಕ್ಷ ನಾಯಕ, ತೆಹ್ರಿಕೆ ಇನ್ಸಾಪ್ ನಾಯಕ ಇಮ್ರಾನ್ ಖಾನ್ ವಿರುದ್ಧ ಅವರದ್ದೇ ಪಕ್ಷದ ಸಂಸದೆಯೊಬ್ಬರು ಹೊರಿಸಿದ ಲೈಂಗಿಕ ಕಿರುಕುಳದ ಆರೋಪಗಳ ಬಗ್ಗೆ ತನಿಖೆಗೆ ವಿಶೇಷ ಸಮಿತಿಯೊಂದನ್ನು ರಚಿಸಲು ಪಾಕ್ ರಾಷ್ಟ್ರೀಯ ಅಸೆಂಬ್ಲಿ ಶುಕ್ರವಾರ ನಿರ್ಧರಿಸಿದೆ. ಇದರೊಂದಿಗೆ ಇಮ್ರಾನ್ ಖಾನ್ ಭಾರೀ ದೊಡ್ಡ ರಾಜಕೀಯ ಹಿನ್ನಡೆಯನ್ನು ಅನುಭವಿಸಿದ್ದಾರೆ.
ಪಾಕ್ ಪ್ರಧಾ ಶಹೀದ್ ಖಖಾನ್ ಅಬ್ಬಾಸಿ ತನ್ನ ಸಂಪುಟವು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಇಮ್ರಾನ್ ಖಾನ್ ವಿರುದ್ಧ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯೆ ಅಯೇಶ್ ಗುಲಾಲಿ ಮಾಡಿರುವ ಲೈಂಗಿಕ ಕಿರುಕುಳದ ಆರೋಪದ ತನಿಖೆಗೆ ಸಮಿತಿಯ ರಚನೆಯನ್ನು ಪ್ರಕಟಿಸಿದರು.
64 ವರ್ಷ ವಯಸ್ಸಿನ ಇಮ್ರಾನ್ ಖಾನ್ ತನಗೆ ಮೊಬೈಲ್ ಮೂಲಕ ಅಸಭ್ಯವಾದ ಸಂದೇಶಗಳನ್ನು ಕಳುಹಿಸಿದ್ದರು ಹಾಗೂ ತನ್ನನ್ನು ವಿವಾಹವಾಗುವಂತೆ ಪುಸಲಾಯಿಸಿದ್ದರೆಂದು ಅಯೆಷಾ ಗುಲಾಲಿ ಆರೋಪಿಸಿದ್ದರು. ಆದರೆ ಈ ಆರೋಪಗಳನ್ನು ಇಮ್ರಾನ್ ಖಾನ್ ತಿರಸ್ಕರಿಸಿದ್ದಾರೆ ಹಾಗೂ ಆಡಳಿತಾರೂಢರೂಢ ಪಿಎಂಎಲ್‌ಎನ್ ಪಕ್ಷವು ಆಕೆಯನ್ನು ಬಳಸಿಕೊಂಡು ತನ್ನ ವರ್ಚಸ್ಸಿಗೆ ಕಳಂಕ ತರಲು ಯತ್ನಿಸುತ್ತಿದೆಯೆಂದು ದೂರಿದ್ದಾರೆ.
ಇಮ್ರಾನ್ ವಿರುದ್ಧದ ಆರೋಪಗಳ ತನಿಖೆಯ ವರದಿಯನ್ನು ವಿಶೇಷ ಸಮಿತಿಯು ಒಂದು ತಿಂಗಳೊಳಗೆ ಸದನಕ್ಕೆ ಸಲ್ಲಿಸಬೇಕೆಂದು ಪ್ರಧಾನಿ ಅಬ್ಬಾಸಿ ಸೂಚಿಸಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ. ತನಿಖೆಯನ್ನು ಕ್ಯಾಮೆರಾದ ಎದುರಲ್ಲೇ ವಿಚಾರಣೆಯನ್ನು ನಡೆಸುವಂತೆಯೂ ಅವರು ಸೂಚಿಸಿದ್ದಾರೆಂದು ಪತ್ರಿಕೆ ಹೇಳಿದೆ.
ಈ ವಾರದ ಆರಂಭದಲ್ಲಿ ತೆಹ್ರಿಕೆ ಇನ್ಸಾಫ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದ ಗುಲಾಲಿ ಅವರು ಇಮ್ರಾನ್‌ಖಾನ್ ಹಾಗೂ ಅವರ ‘ಗ್ಯಾಂಗ್’ ಅನೈತಿಕವಾದ ನಡವಳಿಕೆನ್ನು ಹೊಂದಿರುವುದಾಗಿ ಆರೋಪಿಸಿದ್ದಾರೆ.