×
Ad

ಹುಸಿ ಬಾಂಬ್ ಬೆದರಿಕೆ: ಏರ್‌ ಇಂಡಿಯಾ ವಿಮಾನ 3 ಗಂಟೆ ವಿಳಂಬ

Update: 2017-08-07 20:31 IST

ಜೋಧ್‌ಪುರ, ಆ.7: ಬಾಂಬ್ ಬೆದರಿಕೆ ಕಾರಣ ಜೋಧ್‌ಪುರ ವಿಮಾನ ನಿಲ್ದಾಣದಿಂದ ದಿಲ್ಲಿಗೆ ಹೊರಡಲಿದ್ದ ಏರ್ ಇಂಡಿಯಾ ವಿಮಾನ ಮೂರು ಗಂಟೆ ವಿಳಂಬವಾಗಿ ಪ್ರಯಾಣ ಬೆಳೆಸಿದ ಘಟನೆ ನಡೆದಿದೆ. ಇದು ಹುಸಿಬಾಂಬ್ ಬೆದರಿಕೆ ಕರೆ ಎಂದು ಬಳಿಕ ಅಧಿಕಾರಿಗಳು ತಿಳಿಸಿದರು. ಜೈಪುರದಲ್ಲಿ ಇಳಿಯಬೇಕಿದ್ದ ಓರ್ವ ಪ್ರಯಾಣಿಕ ಜೋಧ್‌ಪುರದಲ್ಲಿ ಇಳಿಯಲು ಮುಂದಾದಾಗ ಸಿಬ್ಬಂದಿಗಳು ಅವಕಾಶ ನೀಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಆತ ವಿಮಾನದ ಸಿಬ್ಬಂದಿಗಳೊಂದಿಗೆ ವಾಗ್ಯುದ್ದ ನಡೆಸಿದ ವೇಳೆ ಬಾಂಬ್ ಇಡುವ ಬೆದರಿಕೆ ಒಡ್ಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ತಕ್ಷಣ ಎಲ್ಲಾ ಪ್ರಯಾಣಿಕರನ್ನೂ ತೆರವುಗೊಳಿಸಿ ಸಿಐಎಸ್‌ಎಫ್ ಹಾಗೂ ಇತರ ಭದ್ರತಾ ಪಡೆಗಳನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಯಿತು. ಬಾಂಬ್ ನಿಷ್ಕ್ರಿಯ ದಳದ ನೆರವಿನಿಂದ ಕೂಲಂಕುಷವಾಗಿ ತಪಾಸಣೆ ನಡೆಸಿ, ಇದು ಹುಸಿ ಬಾಂಬ್ ಕರೆ ಎಂದು ಮನವರಿಕೆ ಆದ ಬಳಿಕ ವಿಮಾನ ಸುಮಾರು 3 ಗಂಟೆ ವಿಳಂಬದ ಬಳಿಕ ಪ್ರಯಾಣ ಆರಂಭಿಸಿತು.ವಿಮಾನ ನಿಲ್ದಾಣದ ಸಿಬ್ಬಂದಿ ನೀಡಿದ ದೂರಿನಂತೆ ಪ್ರಯಾಣಿಕನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ವಿಮಾನನಿಲ್ದಾಣದ ನಿರ್ದೇಶಕ ಜಿ.ಕೆ.ಖರೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News