ಹಫೀಝ್ ಸಯೀದ್ ಸಂಘಟನೆಯಿಂದ ರಾಜಕೀಯ ಪಕ್ಷ
Update: 2017-08-07 22:02 IST
ಇಸ್ಲಾಮಾಬಾದ್, ಆ. 7: 2008ರಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ ಲಷ್ಕರೆ ತಯ್ಯಬ ಭಯೋತ್ಪಾದಕ ಸಂಘಟನೆಯ ಮಾತೃ ಸಂಸ್ಥೆ ಜಮಾಅತ್ ಉದ್ ದಾವಾ (ಜೆಯುಡಿ) ನೂತನ ರಾಜಕೀಯ ಪಕ್ಷವೊಂದನ್ನು ರಚಿಸಿದೆ ಎಂದು ಅದರ ಸದಸ್ಯರು ಸೋಮವಾರ ಹೇಳಿದ್ದಾರೆ.
ನೂತನ ಮಿಲಿ ಮುಸ್ಲಿಮ್ ಲೀಗ್ ಪಕ್ಷವು ಜೆಯುಡಿಯ ಸಿದ್ಧಾಂತಗಳನ್ನೇ ಅನುಸರಿಸಲಿದೆ ಎಂದು ಅದರ ಅಧ್ಯಕ್ಷ ಸೈಫುಲ್ಲಾ ಖಾಲಿದ್ ಹೇಳಿದರು.
‘‘ಪಾಕಿಸ್ತಾನವನ್ನು ನೈಜ ಇಸ್ಲಾಮಿಕ್ ಮತ್ತು ಕಲ್ಯಾಣ ದೇಶವನ್ನಾಗಿ ಮಾಡುವುದಕ್ಕಾಗಿ ನೂತನ ರಾಜಕೀಯ ಪಕ್ಷವನ್ನು ರಚಿಸಲು ನಾವು ತೀರ್ಮಾನಿಸಿದ್ದೇವೆ’’ ಎಂದರು.
ಜೆಯುಡಿ ಮುಖ್ಯಸ್ಥ ಹಫೀಝ್ ಸಯೀದ್ ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾ ಎಂಬುದಾಗಿ ಭಾರತ ಮತ್ತು ಅಮೆರಿಕಗಳು ಹೇಳಿವೆ.