ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ

Update: 2017-08-08 13:04 GMT

ಶಿರ್ವ, ಆ.8: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಮೂರು ದಿನಗಳ ಸಿಎನ್‌ಸಿ ಪ್ರೊಗ್ರಾಮಿಂಗ್ ಮತ್ತು ಸಿಎನ್‌ಸಿ ಯಂತ್ರಗಳ ಪ್ರತ್ಯಕ್ಷ ಪ್ರಾಯೋಗಿಕ ಬಳಕೆಯ ಕಾರ್ಯಾಗಾರವು ಇತ್ತೀಚೆಗೆ ನಡೆಯಿತು.

ವಿಭಾಗದ ಸಂಶೋಧನಾ ಕೇಂದ್ರದಲ್ಲಿರುವ ಅತ್ಯಾಧುನಿಕ ವರ್ಟಿಕಲ್ ಮೆಶಿನಿಂಗ್ ಕೇಂದ್ರ(ಮಿಲ್ಲಿಂಗ್‌ಕೇಂದ್ರ) ಹಾಗೂ ಸಿಎನ್‌ಸಿ ಲೇಥ್‌ಯಂತ್ರದ ಪರಿಚಯ ಮತ್ತು ಅದರಲ್ಲಿ ಕೆಲಸ ಮಾಡುವ ವಿಧಾನವನ್ನು ಪರಿಚಯಿಸ ಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ.ತಿರುಮಲೇಶ್ವರ ಭಟ್, ವಿಭಾಗದ ಮುಖ್ಯಸ್ಥ ಸುದರ್ಶನ್‌ರಾವ್ ಶುಭಹಾರೈಸಿದರು. ಕಾರ್ಯಾ ಗಾರದಲ್ಲಿ ಉಡುಪಿ ಹಾಗೂ ಸುತ್ತಮುತ್ತಲ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News