×
Ad

‘ಗೂಗಲ್’ ವಿರುದ್ಧ ಮಹಿಳಾ ಉದ್ಯೋಗಿಗಳಿಂದ ಮೊಕದ್ದಮೆ

Update: 2017-08-09 22:32 IST

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಆ. 9: ತಾಂತ್ರಿಕ ಕ್ಷೇತ್ರದ ದೈತ್ಯ ‘ಗೂಗಲ್’ನಲ್ಲಿ ಅನುಸರಿಸಲಾಗುತ್ತಿದೆ ಎನ್ನಲಾದ ಲಿಂಗ ತಾರತಮ್ಯ ಮತ್ತು ಮಹಿಳೆಯರ ವಿರುದ್ಧದ ವೇತನ ತಾರತಮ್ಯಕ್ಕಾಗಿ ಗೂಗಲ್ ವಿರುದ್ಧ ಮೊಕದ್ದಮೆ ಹೂಡಲು 60ಕ್ಕೂ ಅಧಿಕ ಹಾಲಿ ಮತ್ತು ಮಾಜಿ ಉದ್ಯೋಗಿಗಳು ನಿರ್ಧರಿಸಿದ್ದಾರೆ.

ಗೂಗಲ್‌ನ ಮಹಿಳಾ ಉದ್ಯೋಗಿಗಳ ಪರವಾಗಿ ಮೊಕದ್ದಮೆ ಹೂಡಲು ಮಾನವಹಕ್ಕುಗಳ ವಕೀಲ ಜೇಮ್ಸ್ ಫಿನ್‌ಬರ್ಗ್ ಸಿದ್ಧತೆ ನಡೆಸುತ್ತಿದ್ದಾರೆ ಎಂದು ‘ದ ಗಾರ್ಡಿಯನ್’ ಮಂಗಳವಾರ ವರದಿ ಮಾಡಿದೆ.

ಸಮಾನ ಅರ್ಹತೆಗಳು ಮತ್ತು ಸಮಾನ ಹುದ್ದೆಗಳ ಹೊರತಾಗಿಯೂ ತಾವು ಗೂಗಲ್‌ನಲ್ಲಿ ಪುರುಷರಿಗಿಂತ ಕಡಿಮೆ ವೇತನ ಪಡೆಯುತ್ತಿರುವುದಾಗಿ ಈ ಮಹಿಳೆಯರು ಭಾವಿಸಿದ್ದಾರೆ ಎಂದು ಅದು ಹೇಳಿದೆ.

ಗೂಗಲ್‌ನಲ್ಲಿರುವ ಸಂಸ್ಕೃತಿ ಮಹಿಳೆಯರಿಗೆ ಪ್ರತಿಕೂಲವಾಗಿದೆ ಹಾಗೂ ಈ ಕಂಪೆನಿಯಲ್ಲಿ ತಮ್ಮ ವೃತ್ತಿ ಬದುಕನ್ನು ಮುಂದುವರಿಸುವ ಅವಕಾಶಗಳಿಗೆ ತಡೆಯೊಡ್ಡುತ್ತದೆ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News