×
Ad

ಬ್ಲೂವೇಲ್‌ಗೇಮ್‌ಗೆ ನಿಷೇಧ ಹೇರಲು ಕೇಂದ್ರಕ್ಕೆ ಮನವಿ: ಪಿಣರಾಯಿ

Update: 2017-08-09 23:30 IST

ತಿರುವನಂತಪುರ, ಆ. 9: ಮಕ್ಕಳು ಬ್ಲೂವೇಲ್ ಗೇಮ್ ಗೀಳು ಅಂಟಿಸಿಕೊಂಡು ಅಪಾಯ ತಂದೊಡದಡುವ ಹಿನ್ನೆಲೆಯಲ್ಲಿ ಈ ಆನ್‌ಲೈನ್ ಗೇಮ್ ನಿಷೇಧಿಸಲು ಕೇಂದ್ರ ಸರಕಾರವನ್ನು ವಿನಂತಿಸಲಾಗುವುದು ಎಂದು ಕೇರಳ ಸರಕಾರ ಬುಧವಾರ ಹೇಳಿದೆ.

 ವಿಧಾನ ಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಈ ಆನ್‌ಲೈನ್ ಗೇಮ್ ಬಗ್ಗೆ ಹೆತ್ತವರು ಜಾಗೃತರಾಗಿ ಇರಲು ರಾಜ್ಯ ಪೊಲೀಸರು ಈಗಾಗಲೇ ಮುನ್ನೆಚ್ಚರಿಕೆ ನೀಡಿದ್ದಾರೆ ಎಂದರು.

ವಿವಿಧ ವರದಿಗಳನ್ನು ಉಲ್ಲೇಖಿಸಿದ ಅವರು, ದೊಡ್ಡ ಸಂಖ್ಯೆಯ ಮಕ್ಕಳು ಹಾಗೂ ಯುವ ಜನಾಂಗ ಈ ಆನ್‌ಲೈನ್ ಗೇಮ್‌ನ ಗೀಳು ಅಂಟಿಸಿಕೊಳ್ಳುತ್ತಿದೆ ಎಂದು ಹೇಳಿದರು.

ಈ ವಿಷಯದ ಕುರಿತು ಅತ್ಯಗತ್ಯದ ಕ್ರಮ ಕೈಗೊಳ್ಳುವುದು ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನೆ ತಂಡದ ಜವಾಬ್ದಾರಿ. ದೇಶದಲ್ಲಿ ಬ್ಲೂಗೇಮ್ ನಿಷೇಧಿಸಲು ನಾವು ಕೇಂದ್ರ ಸರಕಾರವನ್ನು ವಿನಂತಿಸಲಿದ್ದೇವೆ ಎಂದು ಪಿಣರಾಯಿ ವಿಜಯನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News