×
Ad

ಸೂರ್ಯನನ್ನು ಸುತ್ತುವ ಕ್ಷುದ್ರಗ್ರಹಕ್ಕೆ ಭಾರತದ ಯುವ ವಿಜ್ಞಾನಿಯ ಹೆಸರು

Update: 2017-08-10 19:20 IST

ಮಣಿಪುರ, ಆ.10: ಅಂತಾರಾಷ್ಟ್ರೀಯ ಖಗೋಳ ಒಕ್ಕೂಟವು ಕ್ಷುದ್ರಗ್ರಹವೊಂದಕ್ಕೆ ಭಾರತದ ಯುವ ವಿಜ್ಞಾನಿ ಡಾ.ಗುಣೇಶ್ವರ್ ತಂಗ್ಜಾಮ್ ಅವರ ಹೆಸರಿಟ್ಟಿದೆ.

ಸೂರ್ಯನನ್ನು ಸುತ್ತುವ ಈ ಕ್ಷುದ್ರಗ್ರಹಕ್ಕೆ ‘ತಂಗ್ಜಾಮ್ ಕ್ಷುದ್ರಗ್ರಹ ಅಥವಾ ‘11806 ತಂಗ್ಜಾಮ್’ ಎಂದು ನಾಮಕರಣ ಮಾಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಧನಾತ್ಮಕ ವರ್ತನೆಯು ನಿಮ್ಮನ್ನು ಗುರಿಯೆಡೆಗೆ ತಲುಪಿಸುವ ಮಾರ್ಗದರ್ಶಿ ನಕ್ಷತ್ರವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಆರ್ಥಿಕ ವ್ಯವಸ್ಥೆಯ ಸಮಸ್ಯೆಯನ್ನು ಧಾನಾತ್ಮಕ ವರ್ತನೆಯಿಂದ ಪರಿಹರಿಸಬಹುದು. ವಿದ್ಯಾರ್ಥಿಗಳಿಗೆ ನಂಬಿಕೆ ಹಾಗೂ ಸಕಾರಾತ್ಮಕ ಮನೋಭಾವ ಮೂಡಿಸುವುದು ಅತಿ ಮುಖ್ಯವಾಗಿದೆ” ಎಂದು ಹೇಳಿದ್ದಾರೆ,

ಅವರು ಪ್ರಸ್ತುತ ಖಗೋಳ ವಿಜ್ಞಾನದಲ್ಲಿ ಡಾಕ್ಟರೇಟ್ ನಂತರದ ಅಧ್ಯಯನಗಳನ್ನು ನಡೆಸುತ್ತಿದ್ದಾರೆ.

“ನನ್ನ ಕಾಂಟ್ರಾಕ್ಟ್ 2019ರವರೆಗೆ ಇರುವುದರಿಂದ ನಾನು ಜರ್ಮನಿಯಲ್ಲೇ ಮುಂದುವರಿಯಬೇಕಾಗಿದೆ. ಖಗೋಳ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಕಾರಣ ಅಮೆರಿಕದಲ್ಲೂ ನಾನು ಅನುಭವಗಳನ್ನು ಪಡೆಯಲು ಇಚ್ಚಿಸಿದ್ದೇನೆ ಹಾಗೂ ಭಾರತಕ್ಕೆ ಮರಳಿ ಕೆಲಸ ಮಾಡಲು ಬಯಸಿದ್ದೇನೆ” ಎಂದು ತಂಗ್ಜಾಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News