ಫೆಲೆಸ್ತೀನ್ ಪ್ರತಿಭಟನಕಾರರ ಮನೆಗಳನ್ನು ಧ್ವಂಸಗೊಳಿಸಿದ ಇಸ್ರೇಲ್ ಸೇನೆ

Update: 2017-08-10 15:01 GMT

ಜೆರುಸಲೇಂ, ಆ. 10: ಈ ವರ್ಷ ಇಸ್ರೇಲ್ ಸೈನಿಕರ ಮೇಲೆ ದಾಳಿ ನಡೆಸಿದರೆನ್ನಲಾದ ಮೂವರು ಫೆಲೆಸ್ತೀನೀಯರ ಪಶ್ಚಿಮ ದಂಡೆಯಲ್ಲಿರುವ ಮನೆಗಳನ್ನು ತಾನು ಧ್ವಂಸಗೊಳಿಸಿದ್ದೇನೆ ಹಾಗೂ ಇನ್ನೊಂದು ಮನೆಯನ್ನು ಮುಚ್ಚಿದ್ದೇನೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಡೈರ್ ಅಬು ಮಶಲ್ ಗ್ರಾಮದಲ್ಲಿರುವ ಎರಡು ಮನೆಗಳನ್ನು ಗುರುವಾರ ಸೇನೆ ನಾಶಗೊಳಿಸಿರುವುದಾಗಿ ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ. ಜೂನ್‌ನಲ್ಲಿ ನಡೆದ ದಾಳಿಯಲ್ಲಿ ಶಾಮೀಲಾಗಿದ್ದಾರೆನ್ನಲಾದ ಇಬ್ಬರು ಫೆಲೆಸ್ತೀನೀಯರು ಅಲ್ಲಿ ವಾಸಿಸುತ್ತಿದ್ದರು ಎಂದಿದ್ದಾರೆ.

ಮೂರನೆ ಮನೆ ಇತರ ಮನೆಗಳೊಂದಿಗೆ ಬೆಸೆದುಕೊಂಡಿದ್ದರಿಂದ ಅದನ್ನು ಧ್ವಂಸಗೊಳಿಸಲು ಇಸ್ರೇಲ್ ಸೇನೆಗೆ ಸಾಧ್ಯವಾಗಿಲ್ಲ ಎಂದು ಮೇಯರ್ ಹೇಳಿದರು.

ಸಿಲ್ವಾಡ್ ಗ್ರಾಮದಲ್ಲಿರುವ ಮೂರನೆ ಮನೆಯನ್ನು ಇಸ್ರೇಲ್ ಸೇನೆ ಧ್ವಂಸಗೊಳಿಸಿದೆ. ಎಪ್ರಿಲ್‌ನಲ್ಲಿ ಇಸ್ರೇಲ್ ಸೈನಿಕನೊಬ್ಬನನ್ನು ಕಾರು ಹಾಯಿಸಿ ಕೊಂದನೆನ್ನಲಾದ ಫೆಲೆಸ್ತೀನ್ ವ್ಯಕ್ತಿಯೊಬ್ಬರಿಗೆ ಆ ಮನೆ ಸೇರಿತ್ತು.

ಇಸ್ರೇಲ್ ಮೇಲೆ ದಾಳಿ ನಡೆಸುವವರ ಮನೆಗಳನ್ನು ಧ್ವಂಸ ಮಾಡುವುದನ್ನು ಇಸ್ರೇಲ್ ತನ್ನ ನೀತಿಯನ್ನಾಗಿ ಮಾಡಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News