ಸೇನೆಯಲ್ಲಿ ನಿಷೇಧ: ಟ್ರಂಪ್ ವಿರುದ್ಧ ತೃತೀಯ ಲಿಂಗಿಗಳ ದಾವೆ
Update: 2017-08-10 22:25 IST
ವಾಶಿಂಗ್ಟನ್, ಆ. 10: ತೃತೀಯ ಲಿಂಗಿಗಳು ಸೇನೆಯಲ್ಲಿ ಸೇವೆ ಸಲ್ಲಿಸುವುದನ್ನು ನಿಷೇಧಿಸುವ ಆದೇಶವನ್ನು ಪ್ರಶ್ನಿಸಿ ಅಮೆರಿಕದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಐವರು ತೃತೀಯ ಲಿಂಗಿ ಮಹಿಳೆಯರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.
ತಮ್ಮ ಭವಿಷ್ಯದ ಬಗ್ಗೆ ತಮಗೆ ಅನಿಶ್ಚಿತತೆ ಉಂಟಾಗಿದೆ ಎಂಬುದಾಗಿ ವಾಯುಪಡೆ, ತಟ ರಕ್ಷಣಾ ಪಡೆ ಮತ್ತು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಐವರು ದೂರುದಾರರು ಬುಧವಾರ ಫೆಡರಲ್ ನ್ಯಾಯಾಲಯದಲ್ಲಿ ದಾಖಲಿಸಿದ ಮೊಕದ್ದಮೆಯಲ್ಲಿ ಹೇಳಿದ್ದಾರೆ. ತಮ್ಮನ್ನು ಕೆಲಸದಿಂದ ವಜಾಗೊಳಿಸಲಾಗುವುದೇ ಅಥವಾ ತಮ್ಮ ನಿವೃತ್ತಿ ಸೌಲಭ್ಯಗಳನ್ನು ರದ್ದುಮಾಡಲಾಗುವುದೇ ಎಂಬ ಬಗ್ಗೆ ಆತಂಕವಿದೆ ಎಂದಿದ್ದಾರೆ.