6 ವರ್ಷದ ತಮ್ಮನಿಗೆ ಗುಂಡು ಹಾರಿಸಿದ 10 ವರ್ಷದ ಬಾಲಕ

Update: 2017-08-10 17:05 GMT

ವೆಸ್ಟ್ ಮಿಫ್ಲಿನ್ (ಅಮೆರಿಕ), ಆ. 10: ಅಮೆರಿಕದ ಪೆನ್ಸಿಲ್ವೇನಿಯ ರಾಜ್ಯದ ಪಿಟ್ಸ್‌ಬರ್ಗ್ ಸಮೀಪದ ವೆಸ್ಟ್ ಮಿಫ್ಲಿನ್ ನಗರದಲ್ಲಿ 10 ವರ್ಷದ ಬಾಲಕನೊಬ್ಬ ತನ್ನ 6 ವರ್ಷದ ತಮ್ಮನಿಗೆ ಬುಧವಾರ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ಪೊಲೀಸರು ಹೇಳಿದರು.

ಮನೆಯಲ್ಲಿ ಮಕ್ಕಳು ಇಬ್ಬರೇ ಇದ್ದರು ಹಾಗೂ ಅವರ ತಾಯಿ ಕೆಲಸಕ್ಕೆ ಹೋಗಿದ್ದರು.

ಗುಂಡು ಹಾರಿಸಿದ ಬಾಲಕನು ಮೊದಲು ತನ್ನ ತಾಯಿಗೆ ಫೋನ್ ಮಾಡಿದನು ಹಾಗೂ ಆಕೆಯ ಸೂಚನೆಯಂತೆ 911 (ಪೊಲೀಸ್ ತುರ್ತು ಸಂಖ್ಯೆ)ಕ್ಕೆ ಕರೆ ಮಾಡಿದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News