ಉತ್ತರ ಪ್ರದೇಶ: ಆಸ್ಪತ್ರೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಸ್ಥಗಿತಗೊಂಡು 30 ಮಕ್ಕಳು ಮೃತ್ಯು
Update: 2017-08-11 19:23 IST
ಉತ್ತರ ಪ್ರದೇಶ, ಆ.11: ಆಕ್ಸಿಜನ್ ವ್ಯವಸ್ಥೆ ಸ್ಥಗಿತಗೊಂಡು 30 ಮಕ್ಕಳು ಮೃತಪಟ್ಟ ಆಘಾತಕಾರಿ ಘಟನೆ ಗೋರಕ್ ಪುರದ ಬಿ.ಆರ್.ಡಿ. ಆಸ್ಪತ್ರೆಯಲ್ಲಿ ನಡೆದಿದೆ.
ಆಸ್ಪತ್ರೆಯ ವ್ಯವಸ್ಥೆಯನ್ನು ಪರಿಶೀಲಿಸಲು ಮುಖ್ಯಮಂತ್ರಿ ಆದಿತ್ಯನಾಥ್ ಆಸ್ಪತ್ರೆಗೆ ಭೇಟಿ ನೀಡಿದ ಎರಡು ದಿನಗಳ ನಂತರ ಈ ದುರ್ಘಟನೆ ಸಂಭವಿಸಿದೆ. 48 ಗಂಟೆಗಳೊಳಗಾಗಿ 30 ಮಕ್ಕಳು ಮೃತಪಟ್ಟಿದ್ದಾರೆ.
ಆಕ್ಸಿಜನ್ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದ ಏಜೆನ್ಸಿ ದುರ್ಘಟನೆಗೆ ಹೊಣೆಗಾರ ಎಂದು ಆಸ್ಪತ್ರೆಯ ಆಡಳಿತ ಪ್ರತಿಕ್ರಿಯಿಸಿದ್ದಾರೆ. ಗುರುವಾರ ರಾತ್ರಿಯೇ ಆಕ್ಸಿಜನ್ ವ್ಯವಸ್ಥೆ ಸ್ಥಗಿತಗೊಂಡಿದ್ದರಿಂದ 20 ಮಕ್ಕಳು ಮೃತಪಟ್ಟಿದ್ದರು. ಇಂದು ಸಂಜೆಯ ವೇಳೆಗೆ 10 ಮಂದಿ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.