ಫಿಲಿಪ್ಪೀನ್ಸ್‌ನಲ್ಲಿ 6.2ರ ತೀವ್ರತೆಯ ಭೂಕಂಪ

Update: 2017-08-11 14:16 GMT

ಮನಿಲಾ (ಫಿಲಿಪ್ಪೀನ್ಸ್), ಆ. 11: ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದ ದಕ್ಷಿಣ ಭಾಗದಲ್ಲಿ ಶುಕ್ರವಾರ ರಿಕ್ಟರ್ ಮಾಪಕದಲ್ಲಿ 6.2ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪ ಶಾಸ್ತ್ರಜ್ಞರು ಮತ್ತು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಭೂಕಂಪದ ಪರಿಣಾಮವಾಗಿ ಮನಿಲಾ ಮತ್ತು ಅದರ ಸಮೀಪದ ಸ್ಥಳಗಳ ಕಟ್ಟಡಗಳು ಅಲುಗಾಡಿವೆ.

 ಲಿಯನ್ ಪಟ್ಟಣದ ಕರಾವಳಿಯಿಂದ ಅನತಿ ದೂರದ ಸಮುದ್ರದಲ್ಲಿ ಸ್ಥಳೀಯ ಸಮಯ ಮಧ್ಯಾಹ್ನ ಸುಮಾರು 1:28ಕ್ಕೆ 173 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪ ತುಂಬಾ ಆಳದಲ್ಲಿ ಸಂಭವಿಸಿರುವುದರಿಂದ ಭೂಮಿಯ ಮೇಲೆ ಅದರ ಹೆಚ್ಚಿನ ಪರಿಣಾಮ ಉಂಟಾಗಿಲ್ಲ ಎಂದು ಫಿಲಿಪ್ಪೀನ್ಸ್ ಭೂಕಂಪ ಅಧ್ಯಯನ ಕೇಂದ್ರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News