ಹೈದರಾಬಾದ್‌ನಲ್ಲಿ ಜಾಗತಿಕ ಉದ್ಯಮಶೀಲತಾ ಶೃಂಗಸಭೆ: ಅಮೆರಿಕ ನಿಯೋಗದ ನೇತೃತ್ವ ಇವಾಂಕಾಗೆ

Update: 2017-08-11 17:15 GMT

ವಾಶಿಂಗ್ಟನ್, ಆ. 11: ಭಾರತದಲ್ಲಿ ನಡೆಯಲಿರುವ ಜಾಗತಿಕ ಉದ್ಯಮಶೀಲತಾ ಶೃಂಗಸಭೆಯಲ್ಲಿ ಅಮೆರಿಕದ ನಿಯೋಗದ ನೇತೃತ್ವವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪುತ್ರಿ ಇವಾಂಕಾ ವಹಿಸಿಕೊಳ್ಳಲಿದ್ದಾರೆ.

ಭಾರತ ಮತ್ತು ಅಮೆರಿಕಗಳು ಜಂಟಿಯಾಗಿ ಏರ್ಪಡಿಸುವ ಶೃಂಗಸಭೆಯು ಹೈದರಾಬಾದ್‌ನಲ್ಲಿ ನವೆಂಬರ್ 28ರಿಂದ 30ರವರೆಗೆ ನಡೆಯುತ್ತದೆ.

‘‘ಭಾರತಕ್ಕೆ ಹೋಗುವ ಅಮೆರಿಕ ನಿಯೋಗದ ನೇತೃತ್ವವನ್ನು ಇವಾಂಕಾ ಟ್ರಂಪ್ ವಹಿಸಲಿದ್ದಾರೆ ಹಾಗೂ ಆ ಮೂಲಕ ಅವರು ಜಾಗತಿಕ ಮಟ್ಟದಲ್ಲಿ ಮಹಿಳಾ ಉದ್ಯಮಶೀಲತೆಗೆ ಬೆಂಬಲ ನೀಡುತ್ತಾರೆ’’ ಎಂದು ಟ್ರಂಪ್ ಗುರುವಾರ ಟ್ವೀಟ್ ಮಾಡಿದರು.

ಸಮ್ಮೇಳನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಘೋಷಿಸಿದ ಗಂಟೆಗಳ ಬಳಿಕ ಟ್ರಂಪ್ ಈ ಪ್ರತಿಕ್ರಿಯೆ ನೀಡಿದರು.

‘‘ಅಮೆರಿಕ ನಿಯೋಗದ ನೇತೃತ್ವ ವಹಿಸಿಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಜಾಗತಿಕ ಉದ್ಯಮಿಗಳನ್ನು ಭೇಟಿಯಾಗಲು ಹೆಮ್ಮೆಪಡುತ್ತೇನೆ’’ ಎಂಬುದಾಗಿ ಇವಾಂಕಾ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News