ಹಾಜಿ ಅಬ್ದುಲ್ಲಾ ಟ್ರಸ್ಟ್ ಉದ್ಘಾಟನೆಯಂಗವಾಗಿ ರಕ್ತದಾನ ಶಿಬಿರ

Update: 2017-08-12 05:33 GMT

ಉಡುಪಿ, ಆ.12: ಶಿಕ್ಷಣ, ಆರೋಗ್ಯ ಮತ್ತು ಕೋಮು ಸೌಹಾರ್ದದ ಉದ್ದೇಶದೊಂದಿಗೆ ಸ್ಥಾಪಿಸಿರುವ ಹಾಜಿ ಅಬ್ದುಲ್ಲಾ ಟ್ರಸ್ಟ್ ಉದ್ಘಾಟನೆ ಮತ್ತು ಹಾಜಿ ಅಬ್ದುಲ್ಲಾ ಸಂಸ್ಮರಣಾ ಸಮಾರಂಭ ಇಂದು (ಆ.12) ಸಂಜೆ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. 

ಈ ಕಾರ್ಯಕ್ರಮದಲ್ಲಿ ಎ.ವಿ.ಬಾಳಿಗ ಆಸ್ಪತ್ರೆಯ ಪ್ರಧಾನ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ, ಟ್ರಸ್ಟ್ ಸದಸ್ಯರಾದ ಹುಸೈನ್, ಆರ್.ಟಿ.ಐ. ಕಾರ್ಯಕರ್ತರಾದ ಯೋಗಿಶ್ ಶೇಟ್, ಕಾರ್ಪೊರೇಶನ್ ಬ್ಯಾಂಕ್ ನ ಡಾ.ರಾಜೆಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಇಂದು ಸಂಜೆ ಲಯನ್ಸ್ ಭವನ ಬ್ರಹ್ಮಗಿರಿಯಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ (ನಾರ್ತ್ ಸ್ಕೂಲ್) ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಹಾಜಿ ಅಬ್ದುಲ್ಲಾ ಮ್ಯೂಸಿಯಂನ ಕ್ಯೂರೈಟರ್ ಹಾಗೂ ಹಾಜಿ ಅಬ್ದುಲ್ಲಾರ ಕುರಿತು ಪುಸ್ತಕ ಬರೆದಿರುವ ಪ್ರೊ. ಮುರಳೀಧರ್ ಉಪಾಧ್ಯ ಇವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News