35 ಲಕ್ಷ ಜನರು ಸೇನೆ ಸೇರಲು ಮುಂದು: ಉತ್ತರ ಕೊರಿಯ

Update: 2017-08-12 14:43 GMT

ಸಿಯೋಲ್, ಆ. 12: ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ಉತ್ತರ ಕೊರಿಯದ ಮೇಲೆ ವಿಧಿಸಿರುವ ಆರ್ಥಿಕ ದಿಗ್ಬಂಧನದ ವಿರುದ್ಧ ರಾಜಧಾನಿ ಪ್ಯಾಂಗ್‌ಯಾಂಗ್‌ನಲ್ಲಿರುವ ‘ಮೋನ್ಯುಮೆಂಟ್ ಆಫ್ ಪಾರ್ಟಿ ಫೌಂಡಿಂಗ್’ ಆವರಣದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು ಎಂದು ಉತ್ತರ ಕೊರಿಯ ಹೇಳಿದೆ.

ಸುಮಾರು 35 ಲಕ್ಷ ಕಾರ್ಮಿಕರು, ಪಕ್ಷದ ಸದಸ್ಯರು ಮತ್ತು ಸೈನಿಕರು ವಿಶ್ವಸಂಸ್ಥೆಯ ದಿಗ್ಬಂಧನದ ವಿರುದ್ಧ ಹಾಗೂ ಅಮೆರಿಕದ ವಿರುದ್ಧ ಹೋರಾಡಲು ಸೇನೆಗೆ ಸೇರ್ಪಡೆಗೊಳ್ಳುವ ಅಥವಾ ಮರುಸೇರ್ಪಡೆಗೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದರು ಎಂದು ಉತ್ತರ ಕೊರಿಯದ ಅಧಿಕೃತ ಪತ್ರಿಕೆ ‘ರೊಡೊಂಗ್ ಸಿನ್‌ಮುನ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News