ನೇಪಾಳ ಪ್ರವಾಹ, ಭೂಕುಸಿತ: ಮೃತರ ಸಂಖ್ಯೆ 49ಕ್ಕೇರಿಕೆ

Update: 2017-08-13 16:04 GMT

ಕಠ್ಮಂಡು..13: ಕಳೆದ ನಾಲ್ಕು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೇಪಾಳದ ವಿವಿಧೆಡೆ ಸಂಭವಿಸಿದ ನೆರೆ ಹಾಗೂ ಭೂಕುಸಿತದಿಂದಾಗಿ ಮೃತಪಟ್ಟವರ ಸಂಖ್ಯೆ 49ಕ್ಕೇರಿದೆ.

 ನೇಪಾಳದ 21 ಜಿಲ್ಲೆಗಳು ದಿಢೀರ್ ಪ್ರವಾಹ ಹಾಗೂ ಭೂಕುಸಿತದಿಂದ ತೀವ್ರವಾಗಿ ಬಾಧಿತವಾಗಿರುವುದಾಗಿ ಹಿಮಾಲಯನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

 ಸುಮಾರು 35,843 ಮನೆಗಳು ಪ್ರವಾಹದಲ್ಲಿ ಮುಳುಗಡೆಯಾಗಿದ್ದು, 1 ಸಾವಿರ ಮನೆಗಳಿಗ ಹಾನಿಯಾಗಿವೆ ಹಾಗೂ 397 ಜಾನುವಾರುಗಳು ಪ್ರವಾಹದಲ್ಲಿ ಕೊಚ್ಚಿಹೋಗಿರುವುದಾಗಿ ಸಚಿವಾಲಯದ ದತ್ತಾಂಶಗಳು ತಿಳಿಸಿವೆ. ತಾರಾಯಿ ಪ್ರಾಂತದ ಹಲವಾರು ನಗರಗಳು ಜಲಾವೃತೊಂಡಿರುವುದರಿಂದ ಪೂರ್ವ-ಪಶ್ಚಿಮ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಪ್ರವಾಹ ಪರಿಸ್ಥಿತಿ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ನೇಪಾಳ ಸಂಪುಟವು ಶನಿವಾರ ತುರ್ತು ಸಭೆ ನಡೆಸಿತು ಹಾಗೂ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ಜಿಲ್ಲಾಡಳಿತಗಳಿಗೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News