ಇಂಡೊನೇಶ್ಯ: ಪ್ರಬಲ ಭೂಕಂಪ

Update: 2017-08-13 16:58 GMT

ಜಕಾರ್ತ,ಆ.13: ಇಂಡೋನೇಶ್ಯದ ಸುಮಾತ್ರ ದ್ವೀಪದಲ್ಲಿ ರವಿವಾರ ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯನ್ನು ದಾಖಲಿಸಿರುವ ಈ ಭೂಕಂಪದಿಂದಾಗಿ ಸುನಾಮಿ ಅಲೆಗಳುಂಟಾಗುವ ಅಪಾಯವಿಲ್ಲವೆಂದು ಭೂಗರ್ಭ ಶಾಸ್ತ್ರಜ್ಞರು ತಿಳಿಸಿದ್ದಾರೆ.

 ಇಂದು ಬೆಳಗ್ಗೆ 10.08 ಗಂಟೆಗೆ ಭೂಕಂಪ ಸಂಭವಿಸಿದ್ದು, ಭಯಭೀತರಾದ ಜನತೆ ತಮ್ಮ ಮನೆಗಳಿಂದ ಹೊರಗೋಡಿ ಬಂದರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News