ಟೆರೇಸ್‌ನಿಂದ ಕೆಳಗೆ ಬಿದ್ದು ಮಣಿಪುರ ಮಾಜಿ ಸಚಿವನ ಪುತ್ರ ಸಾವು
Update: 2017-08-13 23:07 IST
ದಿಲ್ಲಿ, ಆ.13: ಮಣಿಪುರದ ಮಾಜಿ ಸಚಿವರ 19ರ ಹರೆಯದ ಪುತ್ರನೋರ್ವ ರೆಸ್ಟಾರೆಂಟ್ ಒಂದರ ಟೆರೇಸ್‌ನಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಮಣಿಪುರದ ಮಾಜಿ ಸಚಿವ ಎಂ. ಒಕೆಂದ್ರು ಅವರ ಪುತ್ರ ಸಿದ್ದಾರ್ಥ್ ಮೃತಪಟ್ಟ ಯುವಕ. ಹೌಝ್ ಖಾಸ್ ಗ್ರಾಮವೊಂದರಲ್ಲಿರುವ ರೆಸ್ಟಾರೆಂಟ್‌ನ ಟೆರೇಸ್‌ನಿಂದ ಈತ ಕೆಳಗೆ ಬಿದ್ದಿದ್ದ ಎನ್ನಲಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದ ಈತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಮೃತನ ಸೋದರಿ ಪ್ರಕರಣದ ಬಗ್ಗೆ ಸಂದೇಹ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದು, ಸಮೀಪದ ಕಟ್ಟಡಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.