ಮಂಗಳೂರಿನ ಸೌಜನ್ಯಗೆ ಮಿಸಸ್ ಪಾಪ್ಯುಲರ್ 2017 ಕಿರೀಟ

Update: 2017-08-14 08:58 GMT

ಮಂಗಳೂರು, ಆ.14: ವಿಯೆಟ್ನಾಂನಲ್ಲಿ ಜು. 27ರಿಂದ ಆಗಸ್ಟ್ 4ರವರೆಗೆ ನಡೆದ ಮಿಸಸ್ ಇಂಡಿಯಾ ವರ್ಲ್ಡ್ ವೈಸ್ ಪೂರಕ ತರಬೇತಿ ಹಾಗೂ ಸ್ಪರ್ಧೆಯಲ್ಲಿ ಮಂಗಳೂರಿನ ಸೌಜನ್ಯ ಹೆಗ್ಡೆ 8 ಸಾವಿರ ಸ್ಪರ್ಧಿಗಳ ಪೈಕಿ 7ನೇ ಸ್ಥಾನ ಪಡೆಯುವುದರೊಂದಿಗೆ ಮಿಸಸ್ ಪಾಪ್ಯುಲರ್ 2017 ಕಿರೀಟವನ್ನು ಅಲಂಕರಿಸಿದ್ದಾರೆ.

ಈ ಸ್ಪರ್ಧೆಯನ್ನು ಹಾಟ್ ಮೊಂಡೆ ಸಂಸ್ಥೆಯು ನಡೆಸಿದ್ದು, ವಿವಿಧ ದೇಶಗಳ 8,000 ಸ್ಪರ್ಧಿಗಳು ಭಾಗವಹಿಸಿದ್ದರು. ಅಂತಿಮವಾಗಿ ‘ಬ್ಯೂಟಿ ವಿತ್ ಹಾರ್ಟ್’ ಸೇರಿದಂತೆ 15 ವಿವಿಧ ಟೈಟಲ್‌ಗಳಿಗಾಗಿ 60 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ಇದರರಲ್ಲೂ ಶಾರ್ಟ್‌ ಲಿಸ್ಟ್ ಮಾಡಿ 50 ಕ್ಕೆ ಇಳಿಸಲಾಗಿತ್ತು. ಬಳಿಕ ಟಾಪ್ 25 ಮಂದಿಯನ್ನು ಆಯ್ಕೆ ಮಾಡಲಾಯಿತು. ಬಳಿಕ ಟಾಪ್ 14ರ ಆಯ್ಕೆ ನಡೆದಿದ್ದು, ಇದರಲ್ಲೂ ತಾನು ಆಯ್ಕೆಯಾಗಿದ್ದೆ. ಅಂತಿಮವಾಗಿ 7 ನೇ ಸ್ಥಾನ ಪಡೆಯುವುದರೊಂದಿಗೆ ಮಿಸಸ್ ಪಾಪ್ಯುಲರ್ 2017 ಕಿರೀಟಕ್ಕೆ ಪಾತ್ರವಾಬೇಕಾಯಿತು ಎಂದು ಸೌಜನ್ಯ ಹೆಗ್ಡೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಂತಸವನ್ನು ಹಂಚಿಕೊಂಡರು.

ಮಿಸೆಸ್ ಟಾಲೆಂಟ್ ಟೈಟಲ್‌ಗಾಗಿ ಒಂದು ನಿಮಿಷದ ಸ್ಪರ್ಧೆಯಲ್ಲಿ ತಾನು ದೇವಿಯ ಅವತಾರವನ್ನು ‘ಶಕ್ತಿ’ ಹೆಸರಿನಲ್ಲಿ ಪ್ರದರ್ಶಿಸಿದ್ದೆ. ಉತ್ತಮ ಪ್ರದರ್ಶನ ನೀಡಿದ ತೃಪ್ತಿಯಿದೆ. ಅಲ್ಲದೆ ದೆಹಲಿಯ ರಾಷ್ಟ್ರೀಯ ಅಂಧ ಮಕ್ಕಳ ಶಾಲೆಯ ನೆರವಿಗೆ ಪೂರಕವಾಗಿ ನಡೆದ ಬ್ಯೂಟಿ ವಿತ್ ಹಾರ್ಟ್ ಟಾಸ್ಕ್‌ನಲ್ಲಿ ಎರಡನೇ ಸ್ಥಾನಿಯಾಗಿ ಹೊರಹೊಮ್ಮಿದ್ದೇನೆ. ಈ ಸ್ಪರ್ಧೆಯ ಮೂಲಕ ಅಂಧ ಮಕ್ಕಳ ಶಾಲೆಗೆ ರೂ.1,05,774 ಸಂದಂತಾಗಿದೆ ಎಂದವರು ಹೇಳಿದರು.

ಮಂಗಳೂರಿನಲ್ಲಿ ಸಂಸ್ಥೆಯೊಂದನ್ನು ಹುಟ್ಟುಹಾಕಿ ಮಹಿಳೆಯರಿಗೆ ಪೂರಕವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾ ಗುವುದು. ಒಂದು ತಿಂಗಳೊಳಗೆ ಇದರ ರೂಪುರೋಷೆ ಸಿದ್ಧಗೊಳ್ಳಲಿದೆ ಎಂದು ಸೌಜನ್ಯ ಹೆಗ್ಡೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸೌಜನ್ಯ ಹೆತ್ತವರಾದ ಎಂ.ಸದಾಶಿವ ಹೆಗ್ಡೆ ಹಾಗೂ ನಿಟ್ಟಡೆಗುತ್ತು ಸುಮತಿ ಹೆಗ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News