ಸ್ವತಂತ್ರ ಭಾರತದ ಪ್ರಪ್ರಥಮ ಸರ್ಕಾರದಲ್ಲಿದ್ದ ಸಚಿವರು ಯಾರು ?

Update: 2017-08-14 14:57 GMT

ಭಾರತವು ಈ ಬಾರಿಯ ಆಗಸ್ಟ್ 15ರಂದು 71ನೆ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಬ್ರಿಟಿಷ್ ಆಡಳಿತದಲ್ಲಿದ್ದ ಭಾರತದ  ಸ್ವಾತಂತ್ರ್ಯಕ್ಕಾಗಿ ಸಾವಿರಾರು ಮಂದಿ ಪ್ರಾಣತೆತ್ತರು, ಬ್ರಿಟಿಷರ ದೌರ್ಜನ್ಯಗಳ ನಡುವೆಯೂ ಹೋರಾಟ ನಡೆಸಿದರು. ಈ ಹೋರಾಟಗಳ ಫಲವಾಗಿ 1947ರ ಆಗಸ್ಟ್ 15ರಂದು ಭಾರತವು ಸ್ವಾತಂತ್ರ್ಯ ಪಡೆಯಿತು. ಆ ಸಂದರ್ಭ ದೇಶದ ಮೊದಲ ಸರಕಾರ ರಚನೆಯಾಯಿತು. ದೇಶದ ಪ್ರಧಾನಿಯಾಗಿದ್ದ ಜವಹರಲಾಲ್ ನೆಹರು ವಿದೇಶಾಂಗ ವ್ಯವಹಾರ ಹಾಗೂ ವೈಜ್ಞಾನಿಕ ಸಂಶೋಧನೆಯ ಹೆಚ್ಚುವರಿ ಅಧಿಕಾರವನ್ನು ವಹಿಸಿಕೊಂಡರು. ದೇಶದ ಪ್ರಥಮ ಸಚಿವ ಸಂಪುಟದ ಇತರ ಸಚಿವರ ವಿವರ ಈ ಕೆಳಗಿನಂತಿದೆ.

ಜವಹರಲಾಲ್ ನೆಹರು: ಪ್ರಧಾನ ಮಂತ್ರಿ; ವಿದೇಶಾಂಗ ವ್ಯವಹಾರ ಹಾಗೂ ಕಾಮನ್ ವೆಲ್ತ್ ಸಂಬಂಧಗಳು; ವೈಜ್ಞಾನಿಕ ಸಂಶೋಧನೆ.

ಸರ್ದಾರ್ ವಲ್ಲಭಭಾಯಿ ಪಟೇಲ್: ಮಾಹಿತಿ ಮತ್ತು ಪ್ರಸಾರ; ರಾಜ್ಯಗಳು.

ಡಾ.ರಾಜೇಂದ್ರ ಪ್ರಸಾದ್: ಆಹಾರ ಮತ್ತು ಕೃಷಿ ಇಲಾಖೆ.

ಮೌಲಾನಾ ಅಬುಲ್ ಕಲಾಂ ಆಝಾದ್: ಶಿಕ್ಷಣ ಇಲಾಖೆ.

ಡಾ.ಜಾನ್ ಮಥಾಯಿ: ರೈಲ್ವೆ ಹಾಗೂ ಸಾರಿಗೆ ಇಲಾಖೆ.

ಸರ್ದಾರ್ ಬಲ್ದೇವ್ ಸಿಂಗ್: ರಕ್ಷಣಾ ಇಲಾಖೆ.

ಜಗಜೀವನ್ ರಾಮ್: ಕಾರ್ಮಿಕ ಇಲಾಖೆ.

ಸಿ.ಎಚ್. ಭಾಬಾ: ವಾಣಿಜ್ಯ ಇಲಾಖೆ.

ರಫಿ ಅಹ್ಮದ್ ಕಿದ್ವಾಯಿ: ಸಂವಹನ.

ರಾಜ್ ಕುಮಾರಿ ಅಮ್ರಿತ್ ಕೌರ್: ಆರೋಗ್ಯ ಇಲಾಖೆ.

ಡಾ.ಬಿ.ಆರ್.ಅಂಬೇಡ್ಕರ್: ಕಾನೂನು ಇಲಾಖೆ.

ಆರ್.ಕೆ.ಶಣ್ಮುಖಂ ಚೆಟ್ಟಿ: ಹಣಕಾಸು ಇಲಾಖೆ.

ಡಾ. ಶ್ಯಾಮ ಪ್ರಸಾದ್ ಮುಖರ್ಜಿ: ಕೈಗಾರಿಕೆ ಹಾಗೂ ಸರಬರಾಜು ಇಲಾಖೆ.

ಎನ್.ವಿ.ಗದ್ಗಿತ್: ಗಣಿ ಮತ್ತು ಇಂಧನ ಇಲಾಖೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News