ಲಂಡನ್‌ನ ‘ಬಿಗ್ ಬೆನ್’ ಗಂಟೆ 4 ವರ್ಷ ಮೌನ

Update: 2017-08-14 17:39 GMT

ಲಂಡನ್, ಆ. 14: ಬ್ರಿಟಿಶ್ ಸಂಸತ್ತಿನ ಪ್ರಸಿದ್ಧ ಕ್ಲಾಕ್ ಟವರ್‌ನಲ್ಲಿ ಕಳೆದ 157 ವರ್ಷಗಳಿಂದ ನಿರಂತರವಾಗಿ ಪ್ರತಿ ಗಂಟೆಗೊಮ್ಮೆ ಬಾರಿಸುತ್ತಿರುವ ‘ಬಿಗ್ ಬೆನ್’ ಗಂಟೆ ಆಗಸ್ಟ್ 21ರಿಂದ ನಾಲ್ಕು ವರ್ಷಗಳ ಕಾಲ ಮೌನವಾಗಲಿದೆ.

ಈ ಅವಧಿಯಲ್ಲಿ ಅದರ ನವೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೌಸ್ ಆಫ್ ಕಾಮನ್ಸ್ ಸೋಮವಾರ ತಿಳಿಸಿದೆ.

 13.7 ಟನ್ ತೂಕದ ಗಂಟೆಯನ್ನು ಪ್ರತಿ ಗಂಟೆಗೊಮ್ಮೆ ಬಾರಿಸುತ್ತಿದ್ದ ಸುತ್ತಿಗೆಗಳನ್ನು ಗಂಟೆಯಿಂದ ಬೇರ್ಪಡಿಸಲಾಗುವುದು.

ಆದಾಗ್ಯೂ, ಹೊಸ ವರ್ಷದ ಮುನ್ನಾ ದಿನದ ಆಚರಣೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಇಲ್ಲಿ ಗಂಟೆಯ ಸದ್ದು ಕೇಳುವುದು.

 96 ಮೀಟರ್ ಎತ್ತರದ ಎಲಿಝಬೆತ್ ಟವರ್‌ನಲ್ಲಿ ಗಂಟೆಯನ್ನು ಕೂರಿಸಲಾಗಿದ್ದು, ಅದರ ಕೊನೆಯ ಸದ್ದುಗಳನ್ನು ಕೇಳಲು ಮುಂದಿನ ಸೋಮವಾರ ಸಂಸತ್ ಚೌಕದ ಸಮೀಪದಲ್ಲಿ ಸಾರ್ವಜನಿಕರು ಸೇರಬಹುದು ಎಂದು ‘ಗ್ರೇಟ್ ಕ್ಲಾಕ್’ನ ನಿರ್ವಾಹಕ ಸ್ಟೀವ್ ಜ್ಯಾಗ್ಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News