‘ಬಿಳಿಯ ಶ್ರೇಷ್ಠತಾವಾದಿ’ಗಳನ್ನು ಖಂಡಿಸಿದ ಅಮೆರಿಕ ಉಪಾಧ್ಯಕ್ಷ

Update: 2017-08-14 16:38 GMT

ಕಾರ್ಟಜೇನ (ಕೊಲಂಬಿಯ), ಆ. 14: ‘ಬಿಳಿಯರು ಶ್ರೇಷ್ಠರು’ ಎಂದು ಪ್ರತಿಪಾದಿಸುವ ಕಡು ಬಲಪಂಥೀಯ ಗುಂಪುಗಳು ಅಮೆರಿಕದ ವರ್ಜೀನಿಯದಲ್ಲಿ ನಡೆಸಿರುವ ರ್ಯಾಲಿಯನ್ನು ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ರವಿವಾರ ಖಂಡಿಸಿದ್ದಾರೆ. ದ್ವೇಷ ಮತ್ತು ಹಿಂಸೆಯನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ವರ್ಜೀನಿಯದ ಶಾರ್ಲಟ್‌ವಿಲ್‌ನಲ್ಲಿ ಶನಿವಾರ ನಡೆದ ‘ಬಿಳಿಯರು ಶ್ರೇಷ್ಠರು’ ಸಭೆಯ ವೇಳೆ ನಡೆದ ಹಿಂಸಾಚಾರದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಹಾಗೂ 19 ಮಂದಿ ಗಾಯಗೊಂಡಿದ್ದಾರೆ.

‘‘ಬಿಳಿ ಶ್ರೇಷ್ಠತಾವಾದಿಗಳು, ನವ ನಾಝಿಗಳು ಅಥವಾ ಕೆಕೆಕೆ ಗುಂಪುಗಳ ದ್ವೇಷ ಮತ್ತು ಹಿಂಸೆಯನ್ನು ನಾವು ಸಹಿಸುವುದಿಲ್ಲ’’ ಎಂದು ಕೊಲಂಬಿಯ ದೇಶದ ಕಾರ್ಟಜೇನದಲ್ಲಿ ನಡೆದ ಸುದ್ದಿಗೋಷ್ಠಿಯ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಪೆನ್ಸ್ ನುಡಿದರು.

ಪೆನ್ಸ್ ತನ್ನ ಲ್ಯಾಟಿನ್ ಅಮೆರಿಕ ಪ್ರವಾಸದ ಮೊದಲ ಹಂತದಲ್ಲಿ ಕೊಲಂಬಿಯಕ್ಕೆ ಭೇಟಿ ನೀಡಿದ್ದಾರೆ.

‘ಬಿಳಿ ಶ್ರೇಷ್ಠತಾವಾದಿ’ಗಳನ್ನು ಸ್ಪಷ್ಟ ಮಾತುಗಳಲ್ಲಿ ಖಂಡಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಫಲರಾಗಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News