ನೇಪಾಳ ಪ್ರವಾಹ: ಮೃತರ ಸಂಖ್ಯೆ 78ಕ್ಕೆ; ಆನೆಗಳ ಮೂಲಕ 35 ಭಾರತೀಯರ ರಕ್ಷಣೆ

Update: 2017-08-14 16:54 GMT

ಕಠ್ಮಂಡು, ಆ. 14: ನೇಪಾಳದಲ್ಲಿ ಸೋಮವಾರ ನಡೆದ ಭೂಕುಸಿತದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಪ್ರವಾಹ ಮತ್ತು ಭೂಕುಸಿತಗಳಿಂದ ಮೃತಪಟ್ಟವರ ಸಂಖ್ಯೆ 78ಕ್ಕೇರಿದೆ.

ನೇಪಾಳದಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಇದರಿಂದಾಗಿ ಹಲವಾರು ಹಿಮಾಲಯದ ನದಿಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು, ದೇಶಾದ್ಯಂತ ಪ್ರವಾಹ ತಲೆದೋರಿದೆ ಮತ್ತು ಭೂಕುಸಿತಗಳೂ ಸಂಭವಿಸಿವೆ.

35 ಭಾರತೀಯರ ರಕ್ಷಣೆ: ಈ ನಡುವೆ, ಚಿತವಾನ್ ನ್ಯಾಶನಲ್ ಪಾರ್ಕ್‌ಗೆ ಒಳಪಟ್ಟ ಸೌರಹದಲ್ಲಿ ಸಿಕ್ಕಿಹಾಕಿಕೊಂಡಿದ್ದ ಎಲ್ಲಾ 35 ಭಾರತೀಯ ರಾಷ್ಟ್ರೀಯರನ್ನು ರಕ್ಷಿಸಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿಯ ವಕ್ತಾರರೊಬ್ಬರು ಹೇಳಿದರು. ಅವರನ್ನು ಸಾಕಾನೆಗಳನ್ನು ಬಳಸಿ ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ.

ದೇಶದ 27 ಜಿಲ್ಲೆಗಳು ಪ್ರಾಕೃತಿಕ ವಿಕೋಪಕ್ಕೆ ಸಿಲುಕಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News