​ಕರ್ನಾಟಕದ ಜಲಿಯನ್ ವಾಲಾಬಾಗ್

Update: 2017-08-14 18:02 GMT

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಅಂತ ಬೊಬ್ಬೆ ಇಟ್ಟ ಪ್ರತಿಯೊಬ್ಬ ಭಾರತೀಯನ ಕೂಗಿಗೆ ಪ್ರತೀಕಾರವಾಗಿ ‘ಬ್ರಿಟಿಷರು ಜಲಿಯನ್ ವಾಲಾ ಬಾಗ್’ ಹತ್ಯಾಕಾಂಡ ನಡೆಸಿದರು. ಪಂಜಾಬಿನ ಅಮೃತಸರದ ಈ ಹತ್ಯಾಕಾಂಡವು ರಾಷ್ಟ್ರವ್ಯಾಪಿ ಸ್ವ್ವಾತಂತ್ರ ಸಂಗ್ರಾಮಕ್ಕೆ ಕಿಚ್ಚು ಹೆಚ್ಚಿಸಿ ರಣಕಹಳೆ ಊದಿತು. ಇಂಹದ್ದೇ ಮತ್ತೊಂದು ಘಟನೆ ಕರ್ನಾಟಕದಲ್ಲಿ ನೆದು ಹೋಯಿತು. ಅಷ್ಟಾಗಿ ಜನಸಾಮಾನ್ಯರಲ್ಲಿ ಉಳಿಯದೇ ಹೋದರೂ ‘ಕರ್ನಾಟಕದ ಜಲಿಯನ್ ವಾಲಾಬಾಗ್’ ಎಂದೇ ಕರೆಸಿಕೊಳ್ಳುವ ವಿಧುರಾಶ್ವತ್ಥದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಒಂದು ನೆನಪು. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ ಬಿದನೂರು ತಾಲೂಕಿನ ಪುಟ್ಟ ಗ್ರಾಮ ವಿಧುರಾಶ್ವತ್ಥ. ಈ ಗ್ರಾಮ ಸ್ವಾತಂತ್ರ್ಯ ದಿನಾಚರಣೆಯಂದು ಮಾತ್ರ ಎಲ್ಲಾ ಸ್ವಾತಂತ್ರ ಹೋರಾಟಗಾರರ ನೆನಪಿನಂಗಳದಲ್ಲಿ ಮಿಂಚಿ ಮರೆಯಾಗುತ್ತೆ.

 ಏಕಾಎಕಿ 32 ಜನರನ್ನು ಗುಂಡೇಟಿಗೆ ಬಲಿ ತೆಗೆದುಕೊಂಡ ಕೆಚ್ಚೆದೆಯ ನಾಡು ಇದು. ಅಂದು ಬ್ರಿಟಿಷರ ಗುಂಡೇಟಿಗೆ ಬಲಿಯಾಗಿ ವೀರ ಮರಣವನ್ನಪ್ಪಿದ ವೀರ ಸೇನಾನಿಗಳ ನೆನಪಲ್ಲಿ ಸರಕಾರ ವೀರ ಸೌಧ, ವೀರಗಲ್ಲು -ಸ್ಥೂಪ, ನಿರ್ಮಿಸಿ ಸದಾ ಹುತಾತ್ಮ ಸೇನಾನಿಗಳಿಗೆ ನಮನ ಸಲ್ಲಿಸುತ್ತಿದೆ. ಹುತಾತ್ಮರ ನೆನಪಲ್ಲಿ ಸುಮಾರು 5 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ವೀರ ಸೌಧ ಕೂಡ ಸುಂದರವಾಗಿ ರೂಪಗೊಂಡಿದೆ. ಇಲ್ಲಿರೋ ವೀರ ಸೌಧದ ಕಟ್ಟಡ ದಲ್ಲಿ 1857 ಸಿಪಾಯಿ ದಂಗೆ ಹೋರಾಟದಿಂದ ಹಿಡಿದು 1947ರ ಸ್ವಾತಂತ್ರೋತ್ಸದವರೆಗೂ ಚಿತ್ರಣ ಹೇಳುವ ಚಿತ್ರ ಪಟಗಳ ಪ್ರದರ್ಶನ ಇದೆ. ಇಲ್ಲಿಗೆ ಹೆಜ್ಜೆ ಇಟ್ಟರೆ ಸಾಕು ಹಳೆಯ ದಿನಗಳ ಸಿಹಿ-ಕಹಿ ನೆನಪುಗಳು ತನ್ನಿಂತಾನೆ ಹರಡಿಕೊಳ್ಳುತ್ತದೆ. ನೋಡ್ತಾ ನೋಡ್ತಾ ನಮ್ಮ ಹಿರಿಯರ ಸ್ವಾತಂತ್ರ್ಯ ಹೋರಾಟದ ಕಿಚ್ಚು ನಮ್ಮ ಮೈಮನಗಳನ್ನು ತುಂಬಿಕೊಳ್ಳುತ್ತದೆ.

ಹುತಾತ್ಮರು: ಇಡಗೂರು ಭೀಮಯ್ಯ, ಚೌಳೂರು ನರಸಪ್ಪ, ಗಜ್ಜನಗಾರಿ ನ ಸಪ್ಪ, ಹನುಮಂತಪ್ಪ, ಕಾಡಗೊಂಡನಹಳ್ಳಿ ಮಲ್ಲಯ್ಯ, ಅಶ್ವತ್ಥನಾರಾಯಣ ಶೆಟ್ಟಿ, ವೆಂಕಟಗಿರಿಯಪ್ಪ, ನರಸಪ್ಪ, ಮರಳೂರು ಗೌರಮ್ಮ, (ಒಟ್ಟು 32 ಹೋರಾಟಗಾರರು ಬಲಿ, ಆದರೆ 9 ಹೆಸರು ಮಾತ್ರ ಇಲ್ಲಿ ಲಭ್ಯ)
ಚಳವಳಿಯ ನಾಯಕತ್ವ: ಎನ್.ಸಿ. ನಾಗಯ್ಯರೆಡ್ಡಿ (ನಾಗಿರೆಡ್ಡಿ), ಎನ್.ಸಿ ತಮ್ಮಾರೆಡ್ಡಿ, ನಾಗಸಂದ್ರ, ರಾಮಾರಾವ್, ಗುಡಿಬಂಡೆ ಟಿ.ರಾಮಾಚಾರ್. ಉಪ್ಪಾರಹಳ್ಳಿ ಬಾಬೂ ಸಾಬ್ ಗುಡಿಬಂಡೆ (ಇತ್ತೀ ಚೆಗೆ ನಿಧನ) ಎಂ ಸುಬ್ಬಾರಾವ್, ಹಿಂದೂಪುರ.

ಈಗಿನ ವಿಧುರಾಶ್ವತ್ಥ:
ವೀರ ಭೂಮಿ ವಿಧುರಾಶ್ವತ್ಥ ಶಾಶ್ವತವಾಗಿ ಜನಸಾಮಾನ್ಯರ ಮನಸ್ಸಿನಲ್ಲಿ ಉಳಿಯುವಂತಾಗಲು 2004 ರಲ್ಲಿ ‘ವೀರಸೌಧ’ ನಿರ್ಮಾಣಗೊಂಡಿದೆ. ವಿಧುರಾಶ್ವತ್ಥ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಈ ವೀರ ಸೌಧದೊಳಗಿನ ಚಿತ್ರಗಳು ನೆನಪಿಸುತ್ತವೆ. ಇಲ್ಲಿನ ಗ್ರಂಥ ಭಂಡಾರದಲ್ಲೂ ಸ್ವಾತಂತ್ರ ಸಂಗ್ರಾಮದ ಕುರಿತಾದ ಅತ್ಯಂತ ಅಪರೂಪದ ಪುಸ್ತಕಗಳು ದಾಖಲೆಗಳು ಇವೆ. 2010ರಲ್ಲಿ ಇಲ್ಲಿ ಅಮರಜ್ಯೋತಿಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕತ ಸಾಹಿತಿಯು.ಆರ್.ಅನಂತಮೂರ್ತಿ ಉದ್ಘಾಟಿಸಿದರು. ಆದರೆ ನಿರ್ವಹಣೆ ಕೊರತೆ, ಅಧಿಕಾರಿಗಳ ನಿರ್ಲಕ್ಷ, ಜನಪ್ರತಿನಿಧಿಗಳ ರಾಜಕೀಯದಿಂದಾಗಿ ವಿಧುರಾಶ್ವತ್ಥ ಅವ್ಯವಸ್ಥೆಯ ಆಗರವಾಗಿತ್ತು .ಆದರೆ ಕಳೆದಮೂರು ವರ್ಷದ ಹಿಂದೆ ‘ಕರ್ನಾಟಕದ ಜಲಿಯನ್ ವಾಲಾಬಾಗ್’ಗೆ ಜೀವ ಕಳೆ ತುಂಬುವ ಕೆಲಸ ಮಾಡಲಾಗಿದೆ. ಒಂದಷ್ಟು ಕಾಮಗಾರಿಗಳು ನಡೆದಿವೆ. ಸುಂದರವಾದ ಸ್ವಾತಂತ್ರ್ಯ ಉದ್ಯಾನವನವನ್ನು 8 ಎಕರೆ ವಿಸ್ತಾರದಲ್ಲಿ ನಿರ್ಮಿಸಲಾಗಿದೆ. ಮಕ್ಕಳು ಆಟವಾಡಲು ಪ್ರತ್ಯೇಕ ಸ್ಥಳ. ತೆರೆದ ರಂಗ ಮಂದಿರ, ಉಬ್ಬು ಶಿಲ್ಪಗಳ ಪಾರ್ಕ್. ಸುಂದರವಾದ ಕಾಲುಪಥ. ಅಲ್ಲಲ್ಲಿ ಚಿಮ್ಮುಕಾರಂಜಿ, ಸುತ್ತಲೂ ಬೇಲಿ ನಿರ್ಮಾಣ, ಆಂತರಿಕ ರಸ್ತೆ ನಿರ್ಮಾಣ, ವಾಹನಗಳ ನಿಲ್ದಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಸುಸಜ್ಜಿತ ಯಾತ್ರಿ ನಿವಾಸಕ್ಕೆ 25 ಲಕ್ಷರೂ. ವೆಚ್ಚ ಮಾಡಲಾಗಿದೆ. ಒಟ್ಟು ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ವಿಧುರಾಶ್ವತ್ಥ ನಳ ನಳಿಸುವಂತೆ ಮಾಡಲಾಗಿದೆ. 6 ಲಕ್ಷರೂ. ವೆಚ್ಚದಲ್ಲಿ ಇಲ್ಲಿ ‘ಗಡಿನಾಡ ಭವನ’ ನಿರ್ಮಾಣಕ್ಕೂ ಚಾಲನೆ ನೀಡಲಾಗಿದೆ.

Writer - -ಆದೀಶ್ ಆದಿಯಪ್ಪ

contributor

Editor - -ಆದೀಶ್ ಆದಿಯಪ್ಪ

contributor

Similar News