ಶಾಂತಿ ಅಹಿಂಸೆಯ ಭವ್ಯ ಭಾರತ ನಿರ್ಮಾಣವಾಗಲಿ : ಹರ್ಷಾದ್ ವರ್ಕಾಡಿ

Update: 2017-08-15 11:07 GMT

ಮಂಜೇಶ್ವರ, ಆ.15: ಅಬಿವೃದ್ಧಿ ಫಥದಲ್ಲಿ ಮುನ್ನಡೆಯವ ಮೂಲಕ ನಮ್ಮ ದೇಶ ಜಗತ್ತಿನ ಮುಂದೆ ವಿರಾಜಮಾನವಾಗಿ ಬೆಳಗಲಿ, ಹಲವಾರು ಮಂದಿಯ ತ್ಯಾಗ, ಬಲಿದಾನಗಳಿಂದ ಸ್ವತಂತ್ರಗೊಂಡ ಭಾರತದೇಶ ಅಭಿವೃದ್ಧಿಯ ಕ್ರಾಂತಿ ಫಥದಲ್ಲಿ ಮುನ್ನಡೆಯಲಿ, ಶಾಂತಿ ಮತ್ತು ಅಹಿಂಸೆಯ ವಾತಾವರಣ ನಿರ್ಮಾಣದ ಮೂಲಕ ಭವ್ಯ ಭಾರತವನ್ನು ನಿರ್ಮಿಸೋಣ ಎಂದು ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ನುಡಿದಿದ್ದಾರೆ. ಅವರು ಕಳಿಯೂರು ಸೈಂಟ್ ಜೋಸೆಫರ ಅನುದಾನಿತ ಕಿರಿಯ ಪ್ರಾಥಾಮಿಕ ಶಾಲೆಯಲ್ಲಿ ಜರುಗಿದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ  ಧ್ವಜಾರೋಹಣ ನೆರವೇರಿಸಿ  ಮಾತನಾಡಿದರು. ನವಭಾರತ ಸಂಕಲ್ಪದೊಂದಿಗೆ ನಾವು ಮುನ್ನಡೆಯಬೇಕು, ರಾಷ್ಟ್ರಭಕ್ತಿಯೆಂಬುದು ಬಲವಂತದ ಹೇರಿಕೆಯಾಗದೆ, ಹೃದಯದಲ್ಲಿ ಮೂಡಿಬರಬೇಕು, ಜಗತ್ತಿಗೆ ಶಾಂತಿ ಮಂತ್ರ ಬೋಧಿಸಿದ ರಾಷ್ಟ್ರ ನಮ್ಮದು  ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ವರ್ಕಾಡಿ ಚರ್ಚ್ ಧರ್ಮಗುರುಗಳಾದ ಅತಿ ವಂದನೀಯಾ ಫ್ರಾನ್ಸಿಸ್ ರೋಡ್ರಿಗಸ್ ಅಧ್ಯಕ್ಷತೆ ವಹಿಸಿದ್ದರು. ಬ್ರದರ್ ಪ್ರೇಮ್ ಜಿತ್, ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಲತಾ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ  ದಿವಾಕರ್ ಎಸ್.ಜೆ, ಇಕ್ಬಾಲ್ ಕಳಿಯೂರು, ಶ್ರೀಪತಿ ರಾವ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News