2018ರ ಜೂ.3ರಂದು ನಾಗರಿಕ ಸೇವಾ ಪರೀಕ್ಷೆ

Update: 2017-08-15 16:27 GMT

ಹೊಸದಿಲ್ಲಿ,ಆ.15: ನಾಗರಿಕ ಸೇವೆಗಳಿಗಾಗಿ ಪ್ರಿಲಿಮಿನರಿ ಪರೀಕ್ಷೆಯು ಮುಂದಿನ ವರ್ಷದ ಜೂನ್ 3ರಂದು ನಡೆಯಲಿದೆ ಎಂದು ಕೇಂದ್ರ ಲೋಕಸೇವಾ ಆಯೋಗವು ತಿಳಿಸಿದೆ.

ಈ ವರ್ಷದ ಜೂ.18ರಂದು ನಡೆದಿದ್ದ ಪರೀಕ್ಷೆಯನ್ನು ಹೊರತುಪಡಿಸಿದರೆ 2014, 2015 ಮತ್ತು 2016ರಲ್ಲಿ ಪರೀಕ್ಷೆಗಳು ಆಗಸ್ಟ್ ತಿಂಗಳಿನಲ್ಲಿ ನಡೆದಿದ್ದವು.

ಮುಂದಿನ ವರ್ಷದ ಪರೀಕ್ಷೆಗಾಗಿ ಅಧಿಸೂಚನೆಯು ಫೆ.7ರಂದು ಹೊರಬೀಳಲಿದ್ದು, ಅರ್ಜಿಗಳನ್ನು ಸ್ವೀಕರಿಸಲು 2018, ಮಾರ್ಚ್ 6 ಕೊನೆಯ ದಿನಾಂಕವಾಗಿರುತ್ತದೆ ಎಂದು ಆಯೋಗವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News