ಪ್ಯಾಂಟ್ ಕಿಸೆಯಲ್ಲಿ ಸ್ಫೋಟಿಸಿದ ರೆಡ್ಮಿ ನೋಟ್ 4 ಮೊಬೈಲ್ !

Update: 2017-08-15 17:10 GMT

ಅಮರಾವತಿ , ಆ. 15 : ಆಂಧ್ರ ಪ್ರದೇಶದ ಈಸ್ಟ್ ಗೋದಾವರಿ ಜಿಲ್ಲೆಯ ರಾವುಲಪಲೇಮ್ ಎಂಬಲ್ಲಿ ವ್ಯಕ್ತಿಯೊಬ್ಬನ ಕಿಸೆಯಲ್ಲಿದ್ದ ಶೋಮಿ ( ಕ್ಸಿಯೋಮಿ) ಕಂಪೆನಿಯ ರೆಡ್ಮಿ ನೋಟ್ 4 ಮೊಬೈಲ್ ಹಠಾತ್ತನೆ ಸ್ಪೋಟಿಸಿರುವ ಘಟನೆ ವರದಿಯಾಗಿದೆ. ಭಾವನಾ ಸೂರ್ಯಕಿರಣ್ ಎಂಬವರ ಕಿಸೆಯಲ್ಲಿರುವಾಗ ಮೊಬೈಲ್ ಸ್ಫೋಟಗೊಂಡಿದ್ದು ಅವರಿಗೆ ಗಂಭೀರ ಗಾಯಗಳಾಗಿವೆ. " ನಾವು ಭಾವನಾ ಅವರನ್ನು ಸಂಪರ್ಕಿಸಿದ್ದೇವೆ ಹಾಗು ಈ ಬಗ್ಗೆ ತನಿಖೆ ಪ್ರಾರಂಭಿಸಿದ್ದೇವೆ " ಎಂದು ಶೋಮಿ ( ಕ್ಸಿಯೋಮಿ) ಕಂಪೆನಿ ಹೇಳಿದೆ. 

" ನಮಗೆ ಗ್ರಾಹಕರ ಸುರಕ್ಷತೆ ಅತ್ಯಂತ ಮುಖ್ಯ. ಹಾಗಾಗಿ ನಾವು ಇದನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ನಮ್ಮ ಎಲ್ಲ ಮೊಬೈಲ್ ಗಳು ಅತ್ಯಂತ ಕಠಿಣ ಗುಣಮಟ್ಟ ಪರೀಕ್ಷೆಗೆ ಒಳಗಾಗಿಯೇ ಮಾರುಕಟ್ಟೆಗೆ ಹೋಗುತ್ತವೆ. " ಎಂದು ಕಂಪೆನಿಯ ವಕ್ತಾರ ಹೇಳಿದ್ದಾರೆ. 

" ಭಾವನಾ ಸೂರ್ಯಕಿರಣ್ ಬೈಕಿನಲ್ಲಿ ಹೋಗುತ್ತಿರುವಾಗ ಅವರ ಪ್ಯಾಂಟ್ ಕಿಸೆಯಲ್ಲಿದ್ದ ಮೊಬೈಲ್ ಸ್ಪೋಟಗೊಂಡಿದೆ. ಇದರಿಂದ ಉಂಟಾದ ಬೆಂಕಿ ನೀರು ಹಾಕಿದರೂ ಶಮನಗೊಂಡಿರಲಿಲ್ಲ " ಎಂದು Sakshi.com ವೆಬ್ ಸೈಟ್ ಅನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. 

ಸ್ಪೋಟದಿಂದ ಆಗಿರುವ ಗಾಯಕ್ಕೆ ಪರಿಹಾರ ಕೋರಿ ತಾನು ಕಂಪೆನಿಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಸೂರ್ಯಕಿರಣ್ ಹೇಳಿದ್ದಾರೆ. ಈ ಹಿಂದೆ ರೆಡ್ಮಿ ನೋಟ್ 4 ಸ್ಪೋಟದ ವೀಡಿಯೋವೊಂದು ವೈರಲ್ ಆಗಿತ್ತು. ಆದರೆ ಅದು ಫೇಕ್ ಎಂದು ಮತ್ತೆ ಗೊತ್ತಾಯಿತು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News