ನಟಿಗೆ ಲೈಂಗಿಕ ಕಿರುಕುಳದ ಹಿಂದೆ ಮತ್ತೋರ್ವ ನಟಿ: ಪಲ್ಸರ್ ಸುನಿ

Update: 2017-08-15 17:47 GMT

ಕೊಟ್ಟಾಯಂ, ಆ. 15: ಫೆಬ್ರವರಿ 17ರಂದು ಚಿತ್ರ ನಟಿ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣದ ಹಿಂದೆ ನಟಿಯೊಬ್ಬರು ಇದ್ದಾರೆ ಎಂದು ಪ್ರಕರಣದ ಪ್ರಧಾನ ಆರೋಪಿ ಪಲ್ಸರ್ ಸುನಿ ಹೇಳಿದ್ದಾರೆ.

ಸುನಿ ರವಿವಾರ ‘ಮೇಡಂ’ ಎಂದು ಉಲ್ಲೇಖಿಸಲಾದ ವ್ಯಕ್ತಿ ಈ ಪ್ರಕರಣ ಹಿಂದೆ ಎದ್ದಾರೆ ಎಂದು ಹೇಳಿದ್ದಾನೆ. ಬುಧವಾರ ಆ ನಟಿಯ ಹೆಸರನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ. ಸಿಮ್ ಕಾರ್ಡ್ ರಕ್ಷಿಸಿಕೊಳ್ಳಲು ಗುರುತು ಪ್ರಮಾಣವನ್ನು ನಕಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸುನಿ ಅವರನ್ನು ಕೊಟ್ಟಾಯಂಗೆ ಕರೆದುಕೊಂಡು ಬರಲಾಗಿತ್ತು. ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News