ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು: ಸ್ವಾತಂತ್ರ್ಯೋತ್ಸವ

Update: 2017-08-16 04:58 GMT

ಮೂಡುಬಿದಿರೆ, ಆ. 16: ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು ಇಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಹಿದಾಯತ್ ಹೊಸಮನೆ ಧ್ವಜಾರೋಹಣ ನೆರವೇರಿಸಿದರು.

ಕಾಲೇಜಿನ ಅಧ್ಯಕ್ಷ ಉಸ್ಮಾನುಲ್ ಫೈಝಿ ತೋಡಾರು ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ರವೂಫ್ ಫೈಝಿ ಹೈತಮಿ ಮಲಪ್ಪುರಂ ದುಆ ನೆರವೇರಿಸಿದರು. ಸಂಸ್ಥೆಯ ಉಪ ಪ್ರಾಂಶುಪಾಲ ರಫೀಕ್ ಹುದವಿ ಕೋಲಾರ, ಇಬ್ರಾಹೀಂ ಗುತ್ತು, ಯೂಸುಫ್ ಹಾಜಿ ಕೈಕಂಬ, ಯಹ್ಯಾ ದಾರಿಮಿ, ಶಂಸುದ್ದೀನ್ ಯಮಾನಿ, ಫಾಕೂಕ್ ಪೈಝಿ, ನಝೀರ್ ಪೈಝಿ, ಅಬ್ದಲ್ ರಹಿಮಾನ್ ಹುದವಿ, ಅಬೂಬಕರ್ ಅಝ್ಹರಿ, ಸಿರಾಜ್, ಅನ್ವರ್ ಸರ್, ಅಶ್ರಪ್ ಗುತ್ತು, ಬಾವಾ ಅಭಿಮ್, ಜಾಬಿರ್ ಹಿದಾಯತ್ ನಗರ್, ಅಫೀಫ್ ತೋಡಾರ್, ಮುನಾಜ್ ತೋಡಾರು ಉಪಸ್ಥಿತರಿದ್ದರು.

ಇಸ್ಹಾಕ್ ಹಾಜಿ ತೋಡಾರು, ಸ್ವಾಬಿರ್ ಈಶ್ವರಮಂಗಳ, ಉವೈಸ್ ತೋಕೆ, ಶಫೀಕ್ ಬಪ್ಪಳಿಗೆ, ಮಹಮ್ಮದಲಿ ಶಿರಸಿ ಸ್ವಾತಂತ್ರ್ಯೋತ್ಸವ ಸಂದೇಶ ಭಾಷಣ ಮಾಡಿದರು. ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು. ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳು ನಡೆಯಿತು.

ಹಾರಿಸ್ ಕುಂತೂರು ಸ್ವಾಗತಿಸಿದರು. ಕಲಂದರ್ ವೇಣೂರು ನಿರೂಪಿಸಿದರು. ಇರ್ಫಾನ್ ಕಿನ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News