ಕೋಡಿ: ಬ್ಯಾರೀಸ್‌ನಲ್ಲಿ ಸ್ವಾತಂತ್ರ್ಯೋತ್ಸವ

Update: 2017-08-16 06:53 GMT

ಕೋಡಿ, ಆ. 16: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಸ್ವಾತಂತ್ರ್ಯೋತ್ಸದಲ್ಲಿ ಧ್ವಜಾರೋಹಣವನ್ನು ಕುಂದಾಪುರದ ಪ್ರಸಿದ್ಧ ವಕೀಲರಾದ ಎ.ಬಿ.ಶೆಟ್ಟಿ ನೆರೆವೇರಿಸಿ, ದೇಶಕ್ಕಾಗಿ ದುಡಿದ-ಮಡಿದ ಹೋರಾಟಗಾರರ ಉದ್ದೇಶಗಳನ್ನು ಅರ್ಥೈಸಿಕೊಂಡು ಗಾಂಧಿಯ ರಾಮರಾಜ್ಯದ ಕನಸನ್ನು ಯುವಶಕ್ತಿ ಸಾಕಾರಗೊಳಿಸಬೇಕು ಎಂದು ನುಡಿದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೂದ್‌  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ಯಾರೀಸ್‌ನ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರುಗಳಾದ  ಸಿದ್ದಪ್ಪ ಕೆ. ಎಸ್,  ಫಿರ್ದೋಸ್, ಡಾ. ಶಮೀರ್, ಜಯಂತಿ, ರೇಶ್ಮಾ ಡಿ’ಸೋಜಾ, ರೆಹನಾ ಬೇಗಂ, ಸುಮಿತ್ರಾ ಹಾಗೂ ಸಲಹಾ ಮಂಡಳಿಯ ಸದಸ್ಯರಾದ ಹಾಜಿ ಅಬುಶೇಕ್, ಅಬ್ದುಲ್ಲಾ ಕೋಡಿ, ಶಂಕರ ಬಂಗೇರ, ರಪೀಕ್, ಪ್ರಕಾಶ್, ಯೂಸುಫ್, ಹಳವಳ್ಳಿ ಜಾಮಿಯಾ ಮಸೀದಿ ಅಧ್ಯಕ್ಷ ಫಾರೂಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕ ಸಂದೀಪ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಸುರೇಂದ್ರ ಶೆಟ್ಟಿ ವಕೀಲರನ್ನು ಪರಿಚಯಿಸಿದರು. ಸಹಶಿಕ್ಷಕ ಜಯಶೀಲ ಶೆಟ್ಟಿ ಸ್ವಾಗತಿಸಿ, ಸಹಶಿಕ್ಷಕಿ ಶ್ವೇತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News