ದೇಶದ ಜನರನ್ನು ಪೀತಿಸೋಣ ಅದುವೇ ನಿಜವಾದ ದೇಶ ಪ್ರೇಮ: ಕೆ.ಎಂ. ಸಿದ್ದೀಕ್

Update: 2017-08-16 09:41 GMT

ದೇರಳಕಟ್ಟೆ, ಆ. 16: ದೇಶದಲ್ಲಿ ಅಸಹಿಷ್ಟುತೆ ಬೇಳೆಯುತ್ತಿದ್ದು, ಸ್ವತಂತ್ರ್ಯ ಭಾರತದ ಅತೀ ದೊಡ್ಡ ಸವಾಲಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ವಿರುವ ಭಾರತದ ಮಣ್ಣನ್ನು ಪ್ರೀತಿಸುದು ಮಾತ್ರ ದೇಶ ಪ್ರೇಮವಲ್ಲ ಬದಲು ದೇಶದಲ್ಲಿ ಬದುಕು ಕಟ್ಟಿಕೊಂಡ ಸರ್ವ ಜಾತಿ, ಧರ್ಮ, ಫಂಗಡಗಳ ಜನರನ್ನು ಪ್ರೀತಿಸುವುದೇ ನಿಜವಾದ ದೇಶ ಪ್ರೇಮವಾಗಿದೆ ಎಂದು ಎಸ್ಸೆಸ್ಸೆಪ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಹಜ್ಜ್ ಸಮಿತಿ ಸದಸ್ಯ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ತಿಳಿಸಿದರು.

ಎಸ್ಸೆಸ್ಸೆಪ್ ರಾಜ್ಯ ಸಮಿತಿ ಸ್ವಾತಂತ್ರೋತ್ಸವದ ಅಂಗವಾಗಿ ದೇಶ ಉಳಿಸಿ, ದ್ವೇಶ ಅಳಿಸಿ ಎಂಬ ಘೊಷಣೆಯೊಂದಿಗೆ ಒಂದು ತಿಂಗಳ ಆಭಿಯಾನದ ಭಾಗವಾಗಿ ಸಂಘಟಿಸಿದ ಅಝಾದಿ ರ್ಯಾಲಿಯ ಸಮಾರೋಪ ಕಾರ್ಯಕ್ರಮದ ಉದ್ಘಾಟನೆ ಮಾಡಿ, ಮಾತನಾಡಿದರು.

ಕರ್ನಾಟಕ ಇಹ್ಸಾನ್ ಚೆಯರ್ಮ್ಯಾನ್ ಎನ್.ಕೆ.ಎಂ. ಶಾಫೀ ಸಅಧಿ ಬೆಂಗಳೂರು ಮುಖ್ಯ ಪ್ರಭಾಶಣಗ್ಯದರು. ಎಸ್ಸೆಸ್ಸೆಪ್ ಜಿಲ್ಲಾಧ್ಯಕ್ಷ ಕೆ.ಪಿ. ಸಿರಾಜುದ್ದೀನ್ ಸಖಾಫಿ ಕನ್ಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಎಸ್ ಇ ಡಿ ಸಿ ರಾಜ್ಯಾಧ್ಯಕ್ಷ ಕೆ.ಕೆ.ಎಂ. ಕಾಮಿಲ್ ಸಖಾಫಿ ಎಸ್ಸೆಸ್ಸೆಪ್ ರಾಜ್ಯ ಕಾರ್ಯದರ್ಶಿ ಸುಫೀಯಾನ್ ಸಖಾಫಿ, ಹಾಫಿಲ್ ಯಹ್‌ಕೂಬ್ ಸಅಧಿ ನಾವೂರ್, ಏಷ್ಯನ್ ಭಾವ ಹಾಜಿ, ಇಸ್ಮಾಯಿಲ್ ಸಅಧಿ ಉರುಮಣೆ, ಇಶಾಕ್ ಝುಹ್ರಿ, ಕಾಂಗ್ರೆಸ್ ಮುಖಂಡರಾದ ಕಬೀರ್ ಹಾಜಿ ದೇರಳಕಟ್ಟೆ, ಕುಂಞಿ ಭಾವ ಕಲ್ಕಕಟ್ಟ, ಬಿಜೆಪಿ ಮುಖಂಡರಾದ ರಹೀಮ್ ಉಚ್ಚಿಲ್, ಸಂತೋಷ್ ಕುಮಾರ್ ರೈ ಬೆಳಿಯಾರ್, ಮುನೀರ್ ಬಾವ ಹಾಜಿ ಪೊಟ್ಟೊಳಿಕೆ, ಇಸ್ಮಾಯಿಲ್ ಸಅದಿ ಕಿನ್ಯ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ ಸ್ವಾಗತಿಸಿ, ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕುತ್ತಾರ್ ಮದನಿ ನಗರದಿಂದ ದೇರಳಕಟ್ಟೆ ಸಿಟೀ ಗ್ರೌಂಡ್ ತನಕ ಆರ್ಕಷಕ ರ್ಯಾಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News