ವೆಲ್ಫೇರ್ ಪಾರ್ಟಿ ದ.ಕ ಜಿಲ್ಲಾ ಸಮಿತಿ ವತಿಯಿಂದ ಸ್ವಾತಂತ್ರ್ಯಾಚರಣೆ

Update: 2017-08-16 11:22 GMT

ಮಂಗಳೂರು, ಆ. 16: ವೆಲ್ಫೇರ್ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ  ಕಚೇರಿಯ ಮುಂಭಾಗದಲ್ಲಿ  ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ವೆಲ್ಫೇರ್ ಪಾರ್ಟಿ ರಾಜ್ಯ ಉಪಾಧ್ಯಕ್ಷ ಕೆ. ಶ್ರೀಕಾಂತ್ ಸಾಲಿಯಾನ್ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಮಾತಾಡಿದ ಅವರು, ದೇಶ ಕಟ್ಟುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಾಗಿದೆ. ಸ್ವಾತಂತ್ರ್ಯ ತಂದು ಕೊಟ್ಟ ಹಿರಿಯರ ಆಶಯವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು. ನಂತರ ಪಕ್ಷದ ಜಿಲ್ಲಾಧ್ಯಕ್ಷ ಮೊಯಿನ್ ಕಮರ್ ಮಾತಾಡಿ, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನಮ್ಮಲ್ಲಿನ ಅವ್ಯವಸ್ಥೆ ಮುಂದುವರಿದಿದೆ. ಉತ್ತರಪ್ರದೇಶದಲ್ಲಿ ಎಪ್ಪತ್ತು ಮಕ್ಕಳು ಆಮ್ಲಜನಕವಿಲ್ಲದೆ ಮೃತರಾದ ದುಃಖ ನಮ್ಮನ್ನು ಕಾಡುತ್ತಿದೆ. ಭಾರತದಲ್ಲಿ ಬೆಳೆಯುತ್ತಿರುವ ಪ್ಯಾಶಿಸಂನ್ನು ಕಿತ್ತೊಗೆದು ಪ್ಯಾಶಿಸಂ ಮುಕ್ತ ಭಾರತವನ್ನು ಕಟ್ಟಿಬೆಳೆಸುವ ಜವಾಬ್ದಾರಿ ನಮ್ಮ ಮುಂದಿದೆ. ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಆಡಳಿತ ಯಂತ್ರವನ್ನು ಚಾಲೂ ಸ್ಥಿತಿಯಲ್ಲಿರಿಸಲು ಹೋರಾಡಬೇಕಾಗಿದೆ ಎಂದು ಅವರು ಹೇಳಿದರು. ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷ ಎಂ.  ಮುತ್ತಲಿಬ್ ಸಮಯೋಚಿತವಾಗಿ ಮಾತಾಡಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಫಾ ಮಂಚಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.  ಧ್ವಜಾರೋಹಣದ ನಂತರ ರಾಷ್ಟ್ರಗೀತೆಯನ್ನು  ಹಾಡಲಾಯಿತು. ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ನಿಸಾರ್ ಅಹ್ಮದ್, ಜಿಲ್ಲಾ ಉಪಾಧ್ಯಕ್ಷ ಶಾಕಿರ್ ಅಹ್ಮದ್, ಜಿಲ್ಲಾಸಮಿತಿ ಸದ್ಯಸರಾದ ಜನಾರ್ಧನ,ಅಶ್ರಫ್ ಅಝೀಝ್, ಹೈದರ್ ಪುತ್ತೂರು, ಅಬ್ದುರ್ರಹ್ಮಾನ್ ಮುಳಿಹಿತ್ಲು ಹಾಗು ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News