ಅಲ್-ಖಾದಿಸ ಕ್ಯಾಂಪಸ್: ಸ್ವಾತಂತ್ರ್ಯೋತ್ಸವ

Update: 2017-08-16 12:13 GMT

ಮಂಗಳೂರು, ಆ. 16: ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಬಹಳಷ್ಟು ಮುಸ್ಲಿಂ ವಿದ್ವಾಂಸರು, ಸೂಫಿಗಳು ಹೋರಾಟ ಮಾಡಿದ್ದು. ಅವರನ್ನು ಹಿಂಬಾಲಿಸು ವವರಾಗಿದ್ದಾರೆ ಭಾರತೀಯ ಮುಸ್ಲಿಮರು. ಅಗತ್ಯ ಬಂದರೆ ದೇಶಕ್ಕಾಗಿ ದೇಹ ಕೊಡಲು ನಾವು ಹಿಂಜರಿಯುವವರಲ್ಲ ಎಂದು ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ಎಂದರು. 

ಅಲ್-ಖಾದಿಸ ಕ್ಯಾಂಪಸ್ ನಲ್ಲಿ ನಡೆದ  ಸ್ವಾತಂತ್ರ್ಯೋತ್ಸವದ ಸಮಾರಂಭವನ್ನು ಉದ್ಘಾಟನೆ ಮಾಡುತ್ತಾ ಅವರು ಮಾತನಾಡುತ್ತಿದ್ದರು. 

ನಂತರ ಮುಖ್ಯ ಭಾಷಣ ಮಾಡಿದ ಅಲ್-ಖಾದಿಸ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ ಇದರ ಪ್ರಾಂಶುಪಾಲ ಹಾಫಿಝ್ ಸುಫ್ಯಾನ್ ಸಖಾಫಿ ಮಾತನಾಡುತ್ತ ಈ ದೇಶದ ಅತ್ಯಂತ ದೊಡ್ಡ ಸೌಂದರ್ಯವಾಗಿದೆ. ಹಲವು ಧರ್ಮಗಳು ಜಾತಿಗಳು, ಪಂಗಡಗಳು, ಪಕ್ಷಗಳು, ಪಂಥಗಳು ಆದರೆ ಇಂದು ಅವರೆಡೆಯಲ್ಲಿ ಐಕ್ಯತೆಯ ಕೊರತೆ ಎದ್ದು ಕಾಣುತ್ತಿದ್ದು ಐಕ್ಯತೆಯನ್ನು ಮರಳಿ ತಂದು ಸುಂದರವಾದ ಅಖಂಡವಾದ ಬಲಿಷ್ಠವಾದ ಸರ್ವ ಧರ್ಮ ಸಹಿಷ್ಣುವಾದ ಒಂದು ರಾಷ್ಟ್ರವನ್ನು ಕಟ್ಟಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ರಾಜಕೀಯ ಲಾಭಕ್ಕೆ ಬೇಕಾಗಿ ಧರ್ಮಗಳೆಡೆಯಲ್ಲಿ ಕಚ್ಚಾಟ ನಡೆಸುವುದುನ್ನು ಬಿಟ್ಟು ಈ ದೇಶದ ಭವ್ಯತೆಯನ್ನು ಕಾಪಾಡಲು ಸಹಕರಿಸಬೇಕಾಗಿದೆ ಎಂದು ಕರೆ ನೀಡಿದರು. 

ಸಂಸ್ಥೆಯ ಅಧ್ಯಾಪಕರುಗಳಾದ  ಅಬ್ದುಲ್ ರಶೀದ್ ಅಫ್ಲಲ್ ಸಅದಿ, ಶಫೀಖ್ ಸಖಾಫಿ, ಮೌಲಾನಾ ಅತಾವುಲ್ಲಾ ರಝ್ವಿ, ಉಬೈದುಲ್ಲಾ ಸಖಾಫಿ, ಹಾರಿಸ್ ಮಾಸ್ಟರ್ ಉಪಸ್ಥಿತರಿದ್ದರು. ಮುಬಶ್ಶಿರ್ ಮುಈನಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News